ಇಂದು ವಿಶ್ವ ಗರ್ಭನಿರೋಧಕ ದಿನ: ಆಚರಣೆಯ ಹಿಂದಿನ ಉದ್ದೇಶವೇನು?

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಗರ್ಭನಿರೋಧಕ ಮಾತ್ರೆಗಳ ಬಗ್ಗೆ ಹಲವು ಅನುಮಾನಗಳು ಮತ್ತು ತಪ್ಪು ಕಲ್ಪನೆಗಳಿವೆ. ಅವುಗಳ ಬಗ್ಗೆ ಜಾಗೃತಿ ಮೂಡಿಸಲು ಪ್ರತಿ ವರ್ಷ ಸೆಪ್ಟೆಂಬರ್ 26 ರಂದು ‘ವಿಶ್ವ ಗರ್ಭನಿರೋಧಕ ದಿನ’ವನ್ನು ಆಚರಿಸಲಾಗುತ್ತದೆ.

ಯೋಜಿತವಲ್ಲದ ಗರ್ಭಧಾರಣೆಯನ್ನು ತಡೆಯಲು ಗರ್ಭನಿರೋಧಕಗಳು ಉಪಯುಕ್ತವಾಗಿವೆ. ಮಹಿಳೆಯರು ವಿಶೇಷವಾಗಿ ಇವುಗಳ ಬಗ್ಗೆ ತಿಳಿದಿರಬೇಕು. ಜನನ ನಿಯಂತ್ರಣ ಮಾತ್ರೆಗಳನ್ನು ಬಳಸುವುದರಿಂದ ಕುಟುಂಬ ಯೋಜನೆ, ಎಚ್ಐವಿ ಏಡ್ಸ್ ಮತ್ತು ಇತರ ಲೈಂಗಿಕವಾಗಿ ಹರಡುವ ರೋಗಗಳನ್ನು ತಡೆಯಬಹುದು.

‘ವಿಶ್ವ ಗರ್ಭನಿರೋಧಕ ದಿನ’ವನ್ನು 26 ಸೆಪ್ಟೆಂಬರ್ 2007 ರಿಂದ ಆಚರಿಸಲಾಗುತ್ತಿದೆ. ಪ್ರಪಂಚದಾದ್ಯಂತದ ಕುಟುಂಬ ಯೋಜನಾ ಏಜೆನ್ಸಿಗಳು ಗರ್ಭನಿರೋಧಕಗಳ ಬಗ್ಗೆ ಜಾಗೃತಿ ಮೂಡಿಸಲು ಸಹಾಯ ಮಾಡುತ್ತಿವೆ. ಗರ್ಭನಿರೋಧಕಗಳ ಬಳಕೆಯು ತಾಯಿಯ ಮರಣವನ್ನು 40% ರಷ್ಟು ಕಡಿಮೆ ಮಾಡಬಹುದು. ಗರ್ಭನಿರೋಧಕಗಳು ಯೋಜಿತವಲ್ಲದ ತಾಯ್ತನವನ್ನು ತಡೆಯಲು ಸಹ ಸಹಾಯ ಮಾಡುತ್ತದೆ. ಜನನ ನಿಯಂತ್ರಣ ಮಾತ್ರೆಗಳು ಅನಾರೋಗ್ಯ, ಅನಪೇಕ್ಷಿತ ಗರ್ಭಧಾರಣೆ, ಅಂಗವೈಕಲ್ಯ ಮತ್ತು ಗರ್ಭಪಾತದ ಸಾಧ್ಯತೆಗಳನ್ನು ಕಡಿಮೆ ಮಾಡುತ್ತದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!