CHEATING| ಅನುಷ್ಕಾ ಶೆಟ್ಟಿ, ಮಣಿಶರ್ಮಾ ಹೆಸರೇಳಿ 66 ಲಕ್ಷ ರೂಪಾಯಿ ಪಂಗನಾಮ!

ಹೊಸದಿಗಂತ ಡಿಜಿಟಲ್‌ ಡೆಸ್ಕ್: 

ಇತ್ತೀಚಿನ ದಿನಗಳಲ್ಲಿ ಕೆಲ ಸ್ಟಾರ್ ಗಳಿಗೆ ಡೇಟ್ ಕೊಡ್ತೇವೆ, ಮಾಡೆಲಿಂಗ್ ಅವಕಾಶ ಕೊಡ್ತೀವಿ ಅಂತ ಹೇಳಿ ಹಲವರು ವಂಚನೆ ಮಾಡುತ್ತಿದ್ದಾರೆ. ಟಾಲಿವುಡ್‌ನಲ್ಲಿ ಕೆಲವೇ ದಿನಗಳಲ್ಲಿ ಎರಡು ಹಗರಣಗಳು ಬೆಳಕಿಗೆ ಬಂದಿವೆ. ಎರಡು ದಿನಗಳ ನಂತರ ಇಬ್ಬರು ಬಾಲಿವುಡ್ ನಟರ ವಿರುದ್ಧ ಸೈಬರಾಬಾದ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಬಾಲಿವುಡ್ ನಟರಾದ ಅಪೂರ್ ಅಶ್ವಿನ್ ಮತ್ತು ನತಾಶಾ ಕಪೂರ್ ಚೈಲ್ಡ್ ಮಾಡೆಲಿಂಗ್ ಅವಕಾಶಗಳನ್ನು ನೀಡುವುದಾಗಿ ಹೇಳಿಕೊಂಡು ವಂಚನೆ ಮಾಡುತ್ತಿದ್ದಾರೆ.

ಕಾಸ್ಮೊ ಪಾಲಿಟನ್ ಮಾಡೆಲಿಂಗ್ ಹೆಸರಿನ ವೆಬ್‌ಸೈಟ್ ನಡೆಸುತ್ತಿದ್ದಾಗ ಪ್ರಮುಖ ಉದ್ಯಮಿಯೊಬ್ಬರಿಂದ 20 ಲಕ್ಷ ರೂಗೂ ಹೆಚ್ಚು ವಂಚನೆ ಮಾಡಿರುವ ಬಗ್ಗೆ ಸೈಬರ್ ಕ್ರೈಂನಲ್ಲಿ ಪ್ರಕರಣ ದಾಖಲಾಗಿದೆ. ಇವರಿಬ್ಬರೂ ಸಮಾಜದ ಪ್ರಮುಖ ಉದ್ಯಮಿಗಳ ಮಕ್ಕಳನ್ನು ಗುರಿಯಾಗಿಸಿಕೊಂಡು ಈ ದಂಧೆ ನಡೆಸುತ್ತಿದ್ದರು. ಈ ಹಿನ್ನಲೆಯಲ್ಲಿ ಇದೀಗ ಟಾಲಿವುಡ್ ನಾಯಕಿ ಅನುಷ್ಕಾ ಹಾಗೂ ಸಂಗೀತ ನಿರ್ದೇಶಕರ ಹೆಸರು ಹೇಳಿಕೊಂಡು ವ್ಯಕ್ತಿಯೊಬ್ಬ ಸುಮಾರು 66 ಲಕ್ಷ ರೂಪಾಯಿ ವಂಚಿಸಿರುವುದು ಇಂದು ಬೆಳಕಿಗೆ ಬಂದಿದೆ.

ಎಲ್ಲಾರೆಡ್ಡಿ ಎಂಬ ಟಾಲಿವುಡ್ ಮ್ಯಾನೇಜರ್ ಅನುಷ್ಕಾ ಡೇಟ್ಸ್ ಕೊಡಿಸುವುದಾಗಿ ಹೇಳಿ ನಿರ್ಮಾಪಕ ಲಕ್ಷ್ಮಣ್ ಅವರಿಂದ 51 ಲಕ್ಷ ಸುಲಿಗೆ ಮಾಡಿದ್ದರು. ಅಲ್ಲದೆ ಮಣಿಶರ್ಮಾ ಅವರಿಂದಲೂ ಡೇಟ್‌ ಕೊಡಿಸುವುದಾಗಿ ಹೇಳಿ ಇನ್ನೂ 15 ಲಕ್ಷ ರೂ.ಗಳನ್ನು ಪಡೆದು ಕೈ ಎತ್ತಿದ್ದಾರೆ.  ಮ್ಯಾನೇಜರ್ ಏನೂ ಹೇಳದ ಕಾರಣ ನಿರ್ಮಾಪಕ ಲಕ್ಷ್ಮಣ್ ಏನು ಮಾಡಬೇಕೆಂದು ಗೊತ್ತಾಗದೆ ಫಿಲಂ ಚೇಂಬರ್ ದೂರು ಸಲ್ಲಿಸಿದ್ದರು. ಆರಂಭದಲ್ಲಿ ಹಣ ಹಿಂತಿರುಗಿಸುವುದಾಗಿ ಹೇಳಿದ್ದ ಮ್ಯಾನೇಜರ್ ನಂತರ ತಿರುಗಿ ಬಿದ್ದಿದ್ದಾರೆ. ಹೆಚ್ಚು ಮಾತನಾಡಿದರೆ ಮನೆಯ ಮಹಿಳೆಯರಿಂದ ನಿನ್ನ ಮೇಲೆ ಕೇಸ್ ಹಾಕಿಸುತ್ತೇನೆ ಎಂದು ನಿರ್ಮಾಪಕನಿಗೆ ಬೆದರಿಕೆ ಹಾಕಿದ್ದಾನೆ. ಬೇರೆ ದಾರಿ ಕಾಣದೆ ನಿರ್ಮಾಪಕ ಲಕ್ಷ್ಮಣ್ ಪೊಲೀಸರ ಮೊರೆ ಹೋಗಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!