ಫಾಸ್ಟ್ಯಾಗ್‌ ಹೆದ್ದಾರಿ ಸುಂಕ ವಸೂಲಾತಿಯಲ್ಲಿ ಹೆಚ್ಚಳ- ಸಂಗ್ರಹವಾದ ಮೊತ್ತವೆಷ್ಟಿದೆ ಗೊತ್ತಾ?

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌
ಹೆದ್ದಾರಿ ಸುಂಕ ವಸೂಲಾತಿ ವ್ಯವಸ್ಥೆಯನ್ನು ವೇಗಗೊಳಿಸಲು ಜಾರಿಗೆ ತರಲಾದ ಫಾಸ್ಟ್ಯಾಗ್‌ ವ್ಯವಸ್ಥೆಯು ದೇಶದಾದ್ಯಂತ ಹೆಚ್ಚು ಬಳಕೆಯಾಗುತ್ತಿದ್ದು ಪರಿಣಾಮವಾಗಿ ಸುಂಕ ವಸೂಲಾತಿಯಲ್ಲಿಯೂ ಏರಿಕೆ ದಾಖಲಾಗಿದೆ. 2022ನೇ ಕ್ಯಾಲೆಂಟರ್‌ ವರ್ಷದಲ್ಲಿ ಫಾಸ್ಟ್ಯಾಗ್ ಮೂಲಕ ಎಲೆಕ್ಟ್ರಾನಿಕ್ ಟೋಲ್ ಕಲೆಕ್ಷನ್ (ಇಟಿಸಿ) 46 ಶೇಕಡಾ ಹೆಚ್ಚಾಗಿದ್ದು ಒಟ್ಟಾರೆಯಾಗಿ 50,855 ಕೋಟಿ ರೂಪಾಯಿಗಳನ್ನು ಸಂಗ್ರಹಿಸಲಾಗಿದೆ ಎಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (NHAI) ಹೇಳಿರುವುದಾಗಿ ಮೂಲಗಳು ವರದಿ ಮಾಡಿವೆ.

2021ನೇ ಕ್ಯಾಲೆಂಡರ್ ವರ್ಷದಲ್ಲಿ ಫಾಸ್ಟ್ಯಾಗ್‌ ಮೂಲಕ ಸಂಗ್ರಹಿಸಲಾದ ತೆರಿಗೆ ಮೊತ್ತವು 34,778 ಕೋಟಿ ರೂಪಾಯಿಗಳಷ್ಟಿತ್ತು. 2022ರಲ್ಲಿ ಈ ಸಂಗ್ರಹಣೆಯಲ್ಲಿ 46 ಶೇಕಡಾ ಏರಿಕೆಯಾಗಿ 50,855 ಕೋಟಿ ರೂಪಾಯಿಗೆ ತಲುಪಿದೆ.

ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಹಂಚಿಕೊಂಡಿರುವ ಮಾಹಿತಿಯ ಪ್ರಕಾರ ಡಿಸೆಂಬರ್‌ 2022ರಲ್ಲಿ ಫಾಸ್ಟ್ಯಾಗ್‌ ಮೂಲಕ ದೈನಂದಿನ ಸರಾಸರಿ ಟೋಲ್ ಸಂಗ್ರಹವು 134.44 ಕೋಟಿ ರೂಪಾಯಿಗಳಷ್ಟಿತ್ತು. ಡಿಸೆಂಬರ್ 24, 2022 ರಂದು ಒಂದೇ ದಿನದಲ್ಲಿ ಗರಿಷ್ಟ 144.19 ಕೋಟಿ ರೂಪಾಯಿ ಸಂಗ್ರಹವಾಗಿದೆ ಎನ್ನಲಾಗಿದೆ.

ಅಂತೆಯೇ, FASTag ವಹಿವಾಟುಗಳ ಸಂಖ್ಯೆಯು 2022 ರಲ್ಲಿ ವರ್ಷದಿಂದ ವರ್ಷಕ್ಕೆ ಸುಮಾರು 48 ಪ್ರತಿಶತದಷ್ಟು ಬೆಳವಣಿಗೆಯನ್ನು ಕಂಡಿದೆ ಎಂದು NHAI ಹೇಳಿಕೆ ತಿಳಿಸಿದೆ. 2021 ರಲ್ಲಿ 219 ಕೋಟಿ ಮತ್ತು 2022ರಲ್ಲಿ 324 ಕೋಟಿ ಫಾಸ್ಟ್‌ಟ್ಯಾಗ್ ವಹಿವಾಟುಗಳು ನಡೆದಿವೆ ಎಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಹೇಳಿದೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!