Thursday, March 23, 2023

Latest Posts

ಕೇರಳದಲ್ಲಿ ನಡೆಯಿತು ತೃತೀಯ ಲಿಂಗಿ ಜೋಡಿಯ ಮದುವೆ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕೇರಳದಲ್ಲೊಂದ ತೃತೀಯಲಿಂಗಿ ಜೋಡಿಯ ಮದುವೆ ನಡೆದಿದೆ.ವಿಶೇಷ ಅಂದರೆ ಈ ಜೋಡಿ ಪ್ರೇಮಿಗಳ ದಿನದಂದೇ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.

ಕೇರಳದ ಪಾಲಕ್ಕಾಡ್‌ ಜಿಲ್ಲೆಯ ಎಲವಚ್ಚೇರಿಯ ಪ್ರವೀಣ್ ನಾಥ್ ಹಾಗೂ ಮಲಪ್ಪುರಂ ಜಿಲ್ಲೆಯ ಕೊಟ್ಟೈಕಲ್‌ನ ರಿಶಾನಾ ಐಶು ಪ್ರೀತಿಸಿ ವಿವಾಹವಾಗಿದ್ದಾರೆ. ಕುಟುಂಬ ಸದಸ್ಯರ ಸಮ್ಮುಖದಲ್ಲಿ ಪ್ರೇಮಿಗಳ ದಿನದಂದೇ (Valentines day) ಇವರಿಬ್ಬರ ಮದುವೆ (Marriage) ನಡೀತು.

ತೃತೀಯಲಿಂಗಿಗಳಾಗಿರುವ ಇವರ ಮದುವೆಗೆ ಆರಂಭದಲ್ಲೇ ಮನೆ ಮಂದಿ ವಿರೋಧ ವ್ಯಕ್ತಪಡಿಸಿದ್ದರು. ನಂತರ ಎರಡೂ ಕುಟುಂಬದವರ ಒಪ್ಪಿಗೆಯಿಂದಲೇ ಪ್ರೇಮಿಗಳ ಮದುವೆ ನಡೆದಿದೆ.

ಬಾಡಿಬಿಲ್ಡರ್ ಆಗಿರುವ ಪ್ರವೀಣ್‌, 2021ರಲ್ಲಿ ಮಿಸ್ಟರ್‌ ಕೇರಳ ಎಂಬ ಬಿರುದನ್ನು ಪಡೆದುಕೊಂಡಿದ್ದಾರೆ. 2022ರಲ್ಲಿ ಮುಂಬೈನಲ್ಲಿ ನಡೆದ ಇಂಟರ್‌ನ್ಯಾಷನಲ್‌ ಬಾಡಿ ಬಿಲ್ಡಿಂಗ್‌ನಲ್ಲಿ ತೃತೀಯ ಲಿಂಗಿ (Transgender) ವಿಭಾಗದಲ್ಲಿ ಭಾಗವಹಿಸಿದ್ದಾರೆ. ರಿಶಾನ ಐಶು ತೃತೀಯ ಲಿಂಗಿ ವಿಭಾಗದಲ್ಲಿ ಮಿಸ್ ಮಲಬಾರ್‌ ಅವಾರ್ಡ್‌ ಗೆದ್ದಿದ್ದಾರೆ. ರಿಶಾನಾ ಮಾಡೆಲ್ ಆಗಿಯೂ ಫೇಮಸ್ ಆಗಿದ್ದು, ತ್ರಿಶ್ಯೂರ್‌ನ ಖಾಸಗಿ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಪಾಲಕ್ಕಾಡ್‌ನಲ್ಲಿ ನಡೆದ ಮದುವೆ ಕಾರ್ಯಕ್ರಮದಲ್ಲಿ ಟ್ರಾನ್ಸ್‌ ಸಮುದಾಯದ ಅನೇಕ ಜನರು ಭಾಗವಹಿಸಿದ್ದರು.

ತೃತೀಯಲಿಂಗಿಗಳಿಗಾಗಿ ಸಹಯಾತ್ರಿಕ ಎಂಬ ಸಂಸ್ಥೆ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಪ್ರವೀಣ್ ಹಾಗೂ ರಿಶಾ ಐಶು ಪರಸ್ಪರ ಭೇಟಿಯಾದರು. ಇಬ್ಬರ ನಡುವೆ ಆತ್ಮೀಯತೆ ಬೆಳೆಯಿತು ಎಂದು ತಿಳಿದುಬಂದಿದೆ. ಐಶು ಮುಸ್ಲಿಂ ಸಮುದಾಯಕ್ಕೆ ಸೇರಿದವರಾಗಿದ್ದರು. ತೃತೀಯಲಿಂಗಿಯನ್ನು ಒಪ್ಪಿಕೊಳ್ಳಲು ಅವರ ಕುಟುಂಬ ಸಿದ್ಧವಿರಲ್ಲಿಲ್ಲ. ಬದಲಾಗಿ ಆಕೆಯನ್ನು ಮಾನಸಿಕ ರೋಗಿಯಂತೆ ಕಾಣುತ್ತಿದ್ದರು. ಆದರೆ ನಂತರದ ದಿನಗಳಲ್ಲಿ ಮನೆ ಮಂದಿ ಸಹ ಆಕೆಯ ಐಡೆಂಟಿಟಿಯನ್ನು ಒಪ್ಪಿಕೊಂಡರು.

ಇತ್ತೀಚಿಗಷ್ಟೇ ಕೇರಳದ ತೃತೀಯಲಿಂಗಿ ದಂಪತಿಗಳಿಗೆ ಮಗು ಜನನವಾಗಿತ್ತು. ಹೆಣ್ಣಾಗಿ ಹುಟ್ಟಿ ಗಂಡಾಗಿ ಬದಲಾದ ಸಹದ್ ಮತ್ತು ಗಂಡಾಗಿ ಹುಟ್ಟಿ ಹೆಣ್ಣಾಗಿ ಬದಲಾದ ಜಿಯಾ ತಮ್ಮ ಮೊದಲ ಮಗುವನ್ನು ಪಡೆದುಕೊಂಡಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!