ಹೊಸದಿಗಂತ ಡಿಜಿಟಲ್ ಡೆಸ್ಕ್:
ಇಂದಿನಿಂದ ಏಷ್ಯಾ ಕಪ್-2022 ಟಿ20 ಟೂರ್ನಿ ನಡೆಯಲಿದೆ. ಮೊದಲ ಪಂದ್ಯ ಶ್ರೀಲಂಕಾ ಮತ್ತು ಅಫ್ಘಾನಿಸ್ತಾನ ನಡುವೆ ರಾತ್ರಿ 7:30ಕ್ಕೆ ನಡೆಯಲಿದೆ. ಈ ಟೂರ್ನಿಯಲ್ಲಿ ಒಟ್ಟು ಆರು ತಂಡಗಳು ಭಾಗವಹಿಸಲಿದ್ದು, 13 ಪಂದ್ಯಗಳು ನಡೆಯಲಿವೆ. ಗ್ರೂಪ್-ಎಯಲ್ಲಿ ಭಾರತ ಮತ್ತು ಪಾಕಿಸ್ತಾನ ತಂಡಗಳನ್ನು ಮೊದಲು ಆಯ್ಕೆ ಮಾಡಲಾಯಿತು ಮತ್ತು ಅರ್ಹತಾ ಪಂದ್ಯವನ್ನು ಆಡಿದ ನಂತರ ಹಾಂಗ್ ಕಾಂಗ್ ತಂಡವೂ ಟೂರ್ನಿಯಲ್ಲಿ ಅರ್ಹತೆ ಪಡೆಯಿತು.
ಈ ವಾರದ ಆರಂಭದಲ್ಲಿ ಯುನೈಟೆಡ್ ಅರಬ್ ಎಮಿರೇಟ್ಸ್ ವಿರುದ್ಧ ಹಾಂಕಾಂಗ್ ತಂಡ ಎಂಟು ವಿಕೆಟ್‌ಗಳಿಂದ ಗೆದ್ದಿತ್ತು. ಹೀಗಾಗಿ 2022ರ ಏಷ್ಯಾಕಪ್‌ಗೆ ಅರ್ಹತೆ ಪಡೆದಿದೆ. ಗ್ರೂಪ್-ಎ ಭಾಗವಾಗಿ ತಂಡವು ಆಗಸ್ಟ್ 31 ರಂದು ಭಾರತ ಮತ್ತು ಸೆಪ್ಟೆಂಬರ್ 2 ರಂದು ಪಾಕಿಸ್ತಾನವನ್ನು ಎದುರಿಸಲಿದೆ.
ಆದರೆ, ಏಷ್ಯಾಕಪ್ ಗೆ ಅರ್ಹತೆ ಪಡೆದ ಖುಷಿಯಲ್ಲಿ ಹಾಂಕಾಂಗ್ ತಂಡದ ಆಟಗಾರರು ಫುಲ್ ಬಿಂದಾಸ್ ಆಗಿದ್ದಾರೆ. ಬಾರ್ ಬಾರ್ ದೇಖೋ ಚಿತ್ರದ ‘ಕಾಲಾ ಚಷ್ಮಾ’ ಹಾಡಿಗೆ ಉತ್ಸಾಹದಿಂದ ಕುಣಿದಿದ್ದಾರೆ. ಈ ವಿಡಿಯೋವನ್ನು ವಿಕೆಟ್ ಕೀಪರ್ ಜೀಶನ್ ಅಲಿ ತಮ್ಮ ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಇದೀಗ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.