ರಾಜ್ಯದಲ್ಲಿ ಮೋಸ್ಟ್ ಡೆಂಜರ್ ಕೋರಲ್ ಸ್ನೇಕ್ ಪತ್ತೆ, ಈ ಹಾವು ಕಚ್ಚಿದ್ರೆ ಸಾಯಲ್ಲ, ಆದರೆ..

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: 

ಉರಗಗಳ ಸಂತತಿಯಲ್ಲೇ ಅಪರೂಪದ ಮೋಸ್ಟ್ ಡೆಂಜರ್ ಕೋರಲ್ ಸ್ನೇಕ್ ಕಳಸದ ಕಲ್ಮಕ್ಕಿ ಗ್ರಾಮದಲ್ಲಿ ಪತ್ತೆಯಾಗಿದೆ.

ದೇಹದ ಮೇಲೆ ಕಪ್ಪು, ಕೆಳಭಾಗದಲ್ಲಿ ಕೆಂಪು ಬಣ್ಣದಿಂದ ಕೂಡಿರುವ ಈ ಹಾವನ್ನು, ಮಲೆನಾಡಲ್ಲಿ ರಕ್ತಕನ್ನಡಿ ಹಾವು, ಹಪ್ಪಟೆ, ಹವಳದ ಹಾವು ಎಂದು ಕರೆಯುತ್ತಾರೆ. ಕಳಸದ ಉರಗತಜ್ಞ ರಿಜ್ವಾನ್ ಎಂಬವರ ಮನೆ ಅಂಗಳದಲ್ಲಿ ಈ ಹಾವು ಕಾಣಿಸಿಕೊಂಡಿದೆ.

ಈ ಹಾವು ಕಡಿದರೆ ಸಾಯೋದು ಕಡಿಮೆ, ಆದರೆ ದೇಹಕ್ಕೆ ನಾನಾ ಸಮಸ್ಯೆಗಳನ್ನು ತಂದು ಒಡ್ಡುತ್ತದೆ. ಈ ಹಾವಿನ ಹಲ್ಲು ಹೆಚ್ಚಾಗಿ ಬಾಗಿರುವುದರಿಂದ ವಿಷ ದೇಹ ಸೇರುವು ಕಡಿಮೆ. ವಿಷ ದೇಹ ಸೇರಿದರೆ ಹಲವಾರು ಸಮಸ್ಯೆಗಳು ಎದುರಾಗಲಿವೆ ಎಂದು ಉರಗ ತಜ್ಞ ರಿಜ್ವಾನ್ ತಿಳಿಸಿದ್ದಾರೆ.

ಪಶ್ಚಿಮ ಘಟ್ಟಗಳ ಭಾಗದಲ್ಲಿ ಮಾತ್ರ ಈ ಅಪರೂಪದ ಹಾವುಗಳು ಕಾಣಸಿಗುತ್ತವೆ. ಇವು ನಿಶಾಚಾರಿಯಾಗಿದ್ದು, ರಾತ್ರಿ ವೇಳೆ ಹೆಚ್ಚಾಗಿ ಚಟುವಟಿಕೆಯಿಂದ ಇರುತ್ತವೆ

- Advertisement - Prestige

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!