ಹೊಸದಿಗಂತ ಡಿಜಿಟಲ್ ಡೆಸ್ಕ್:
ಜಮ್ಮು ಕಾಶ್ಮೀರದಲ್ಲಿ ಇದೀಗ ಹಿಮಪಾತವಾಗುತ್ತಿದ್ದು, ಅದನ್ನು ನೋಡೋದಕ್ಕೆ ಪ್ರವಾಸಿಗರು ಮುಗಿಬೀಳುತ್ತಿದ್ದಾರೆ.
ಶಿಮ್ಲಾ, ಕಸೌಲಿ ಮತ್ತು ಹಿಮಾಚಲ ಪ್ರದೇಶದ ಪಕ್ಕದ ಪಟ್ಟಣಗಳಲ್ಲಿ ಭಾನುವಾರದಂದು ಮೊದಲ ಹಿಮಪಾತವಾಯಿತು. ಜಮ್ಮು ಮತ್ತು ಕಾಶ್ಮೀರದ ಗುಲ್ಮಾರ್ಗ್ ಹಿಮಪಾತದ ನಂತರ ‘ಅದ್ಭುತ’ವಾಗಿ ರೂಪಾಂತರಗೊಂಡಿದೆ. ಇದನ್ನು ಕಾಣಲು ಜನ ಆಗಮಿಸಿದ್ದಾರೆ. ಹಿಮದಿಂದ ತುಂಬಿದ ಕಾಶ್ಮೀರವನ್ನು ಕಣ್ತುಂಬಿಕೊಂಡಿದ್ದಾರೆ.
ತಾಜಾ ಹಿಮಪಾತವು ಸೋಮವಾರ ಜಮ್ಮು ಮತ್ತು ಕಾಶ್ಮೀರದ ಹೆಚ್ಚಿನ ವ್ಯಾಪ್ತಿಯನ್ನು ಆವರಿಸಿದೆ. ಹಿಮದಿಂದ ಆವೃತವಾದ ಪರ್ವತ ಶಿಖರಗಳಿಂದ ಬೀಸುವ ಚಳಿಯ ಗಾಳಿಯು ಕನಿಷ್ಠ ಮತ್ತು ಗರಿಷ್ಠ ತಾಪಮಾನವನ್ನು ಮತ್ತಷ್ಟು ಕಡಿಮೆ ಮಾಡಿದೆ.
ಹಿಮಾಚಲ ಪ್ರದೇಶದ ಕಸೌಲಿಯಲ್ಲಿ ಈ ಋತುವಿನ ಮೊದಲ ಹಿಮಪಾತವಾಗಿದೆ. ಹಿಮದಿಂದ ಆವೃತವಾದ ಭೂದೃಶ್ಯದ ದೃಶ್ಯಗಳ ವಿಡಿಯೋ ವೈರಲ್ ಆಗಿದೆ. ಸಮಯ ಇದ್ದರೆ ನೀವು ಒಮ್ಮೆ ಭುವಿಯ ಸ್ವರ್ಗಕ್ಕೆ ಭೇಟಿ ನೀಡಿ ಬನ್ನಿ.