Saturday, October 1, 2022

Latest Posts

ಚಿಕಿತ್ಸೆಗೆ ಬಂದು ಸಿಕ್ಕಿಬಿದ್ದ ಮೋಸ್ಟ್ ವಾಂಟೆಡ್ ನಕ್ಸಲ್

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ಜಾರ್ಖಂಡ್‌ನ ನಕ್ಸಲ್‌ ನಾಯಕನೊಬ್ಬನನ್ನು ಮಹಾರಾಷ್ಟ್ರದ ಭಯೋತ್ಪಾದಕ ನಿಗ್ರಹ ದಳ (ಎಟಿಎಸ್‌) ಬಂಧಿಸಿದೆ.
ಜಾರ್ಖಂಡ್‌ನ ಹಜಾರಿಬಾಗ್‌ನ ನಿವಾಸಿಯಾಗಿರುವ ದೀಪಕ್‌ ಯಾದವ್‌ ಅಲಿಯಾಸ್‌ ಕಾರು ಹುಲಸ್‌ ಯಾದವ್‌ ಎಂಬಾತನ ತಲೆಗೆ 15 ಲಕ್ಷ ರೂಪಾಯಿ ಬಹುಮಾನ ಘೋಷಿಸಲಾಗಿತ್ತು. ಅಲ್ಲದೇ, ಜಾರ್ಖಂಡ್‌ ಸರ್ಕಾರ ಈತನನ್ನು ಮೋಸ್ಟ್ ವಾಂಟೆಡ್ ನಕ್ಸಲ್​ ಎಂದೂ ಪ್ರಕಟಿಸಿತ್ತು.

ಕಾರು ಹುಲಸ್‌ ಯಾದವ್‌ ತನ್ನ ಕಾಲಿಗೆ ಗಾಯವಾಗಿದ್ದು, ಇದರ ಚಿಕಿತ್ಸೆಗೆಂದು ಜಾರ್ಖಂಡ್‌ನಿಂದ ಮಹಾರಾಷ್ಟ್ರಕ್ಕೆ ಬಂದಿದ್ದ. ರಾಜ್ಯ ರಾಜಧಾನಿ ಮುಂಬೈನಿಂದ ಕೇವಲ 50 ಕಿಲೋ ಮೀಟರ್​ ದೂರದಲ್ಲಿರುವ ಪಲ್ಘಾರ್​ ಜಿಲ್ಲೆಯ ನಲಸೋಪಾರಾದ ಧನಿವ್ ಬಾಗ್ ರಾಮ್ ನಗರ ಪ್ರದೇಶದಲ್ಲಿ ಉಳಿದುಕೊಂಡಿದ್ದ ಎಂದು ಹೇಳಲಾಗಿದೆ.

ಇದರ ಬಗ್ಗೆ ಖಚಿತ ಮಾಹಿತಿ ಪಡೆದ ಮಹಾರಾಷ್ಟ್ರದ ಭಯೋತ್ಪಾದಕ ನಿಗ್ರಹ ದಳದ ಪೊಲೀಸರು ದಾಳಿ ಮಾಡಿ, ನಕ್ಸಲ್​​ ಕಾರು ಹುಲಸ್‌ ಯಾದವ್‌ನನ್ನು ಬಂಧಿಸಿದೆ.

2004ರಿಂದ ಜಾರ್ಖಂಡ್​ನಲ್ಲಿ ನಕ್ಸಲ್​ ಚಟುವಟಿಕೆಯಲ್ಲಿ ಸಕ್ರಿಯವಾಗಿ ಭಾಗಿಯಾಗಿದ್ದ. ಎರಡು ತಿಂಗಳಿಂದ ನಲಸೋಪಾರಾದಲ್ಲಿ ನೆಲೆಸಿದ್ದ ಎಂದು ಎಟಿಎಸ್‌ ಅಧಿಕಾರಿಗಳು ತಿಳಿಸಿದ್ದಾರೆ.

ನಕ್ಸಲ್‌ ನಾಯಕ ಕಾರು ಹುಲಸ್‌ ಯಾದವ್‌ ಬಂಧನದ ಬಗ್ಗೆ ಈಗಾಗಲೇ ಜಾರ್ಖಂಡ್​ನ ಪೊಲೀಸರಿಗೆ ಮಾಹಿತಿ ನೀಡಲಾಗಿದೆ. ಈ ನಕ್ಸಲ್​ನನ್ನು ಸ್ಥಳೀಯ ಕೋರ್ಟ್​ಗೆ ಹಾಜರುಪಡಿಸಿದ ನಂತರ ಜಾರ್ಖಂಡ್​ ಪೊಲೀಸರಿಗೆ ಹಸ್ತಾಂತರಿಸಲಾಗುವುದು ಎಂದು ಮಹಾರಾಷ್ಟ್ರ ಪೊಲೀಸರು ವಿವರಿಸಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!