ಬಸ್‌ನಲ್ಲಿ ಸೀಟ್ ಸಿಗದೆ ಅಪರಿಚಿತೆ ಕೈಲಿ ಮಗು ಕೊಟ್ಟ ಅಮ್ಮ, ಆಕೆ ಏಕ್‌ದಮ್ ಪರಾರಿ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬಸ್‌ಗಳಲ್ಲಿ ತುಂಬಾ ರಶ್ ಇದ್ದಾಗ ಮಗು ಎತ್ತುಕೊಂಡು ಬಂದವರಿಗೆ ಯಾರಾದ್ರೂ ಸೀಟ್ ಬಿಟ್ಟುಕೊಡ್ತಾರೆ, ಅಥವಾ ಮಗುವನ್ನು ಕೊಡಿ ನಾವು ಎತ್ಕೋತಿವಿ ಅಂತ ಇಸ್ಕೋತಾರೆ.

ಇದೀಗ ರೀತಿ ರಶ್ ಇದ್ದ ಬಸ್‌ನಲ್ಲಿ ಮಹಿಳೆ ಕೈಗೆ ಕಂದಮ್ಮನನ್ನು ಕೊಟ್ಟ ತಾಯಿ ಕಣ್ಣೀರಿನಲ್ಲಿ ಕೈತೊಳೆಯುವಂತಾಗಿದೆ. ಮಗುವನ್ನು ಕರೆದುಕೊಂಡು ಕುಳಿತಿದ್ದ ಮಹಿಳೆ ಏಕಾಏಕಿ ಪರಾರಿಯಾಗಿದ್ದಾಳೆ!

ಚನ್ನಪಟ್ಟಣದ ಬಸ್ ನಿಲ್ದಾಣದಲ್ಲಿ ಸವಿತಾ ಏಳು ತಿಂಗಳ ಮಗು ಸಮೇತ ಬಸ್ ಹತ್ತಿದ್ದಾರೆ. ಇನ್ನೇನು ಮಳವಳ್ಳಿಯಲ್ಲಿ ಬಸ್ ಇಳಿಯಬೇಕು ಎನ್ನುವಾಗ ಲಗೇಜ್ ಎತ್ತಿಕೊಂಡು ಮಗು ಕಡೆ ನೋಡುವಾಗ ಮಹಿಳೆ ಹಾಗೂ ಮಗು ಇಬ್ಬರೂ ಸವಿತಾಗೆ ಕಾಣಿಸಿಲ್ಲ.

ಗೋಳಾಡುತ್ತಾ ಸವಿತಾ ಮಳವಳ್ಳಿ ಠಾಣೆಯಲ್ಲಿ ದೂರು ನೀಡಿದ್ದಾರೆ. ಸದ್ಯ ಪೊಲೀಸರು ಮಹಿಳೆ ಹುಡುಕಾಟದಲ್ಲಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!