SHOCKING NEWS | ಮಾನವನ ಮೂಳೆ ಪುಡಿ ತಿಂದ್ರೆ ಗರ್ಭಿಣಿಯಾಗ್ತೀಯ, ಸೊಸೆಗೆ ಕಿರುಕುಳ ಕೊಟ್ಟ ಅತ್ತೆ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕೆಲವೊಮ್ಮೆ ಯಾವುದಾದರೂ ವಿಷಯಕ್ಕೆ ಬೇಕೇ ಬೇಕು ಎಂದು ಅಂದುಕೊಂಡರೆ ಅದಕ್ಕಾಗಿ ಯಾವ ಮಟ್ಟಕ್ಕಾದರೂ ಹೋಗುವ ಸಾಧ್ಯತೆ ಇದೆ. ಇಲ್ಲಿ ಅತ್ತೆಯೊಬ್ಬರು ಸೊಸೆ ಗರ್ಭಿಣಿಯಾಗಿಲ್ಲ ಎಂದು ತಂತ್ರಿ ಸೂಚನೆಯಂತೆ ಮೂಳೆಗಳ ಪುಡಿಯನ್ನು ಕುಡಿಯುವಂತೆ ಒತ್ತಾಯಿಸಿದ್ದಾಳೆ.

ಸಿನ್ಹಾಗಡ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಏಳು ಜನರ ವಿರುದ್ಧ ಪ್ರಕರಣ ದಾಖಲಾಗಿದೆ. ಪುಣೆಯಲ್ಲಿ ವಾಸಿಸುವ ಮಹಿಳೆಗೆ ಮಕ್ಕಳಾಗಿಲ್ಲ ಎಂದು ಸ್ಥಳೀಯ ತಂತ್ರಿಯ ಸಹಾಯವನ್ನು ಅತ್ತೆ ಹಾಗೂ ಗಂಡ ಯಾಚಿಸಿದ್ದಾರೆ. ತಂತ್ರಿ ಅಘೋರಿಯೊಂದಿಗೆ ಸಂಪರ್ಕ ಕೊಟ್ಟಿದ್ದು, ಅಘೋರಿ ಮಾನವನ ಮೂಳೆಗಳ ಪುಡಿಯನ್ನು ಸೇವಿಸಿದರೆ ಮಕ್ಕಳಾಗುತ್ತದೆ ಎಂದು ಹೇಳಿದ್ದಾರೆ.

ಈ ಹಿಂದೆ ಸೊಸೆ ಪೊಲೀಸ್ ಠಾಣೆಯಲ್ಲಿ ಅತ್ತೆ, ಗಂಡನ ಮೇಲೆ ಎರಡು ಬಾರಿ ದೂರು ದಾಖಲಿಸಿದ್ದಳು.ವರದಕ್ಷಿಣೆ ಕಿರುಕುಳ ಹಾಗೂ ಮಾಟಮಂತ್ರದ ಪ್ರಯೋಗದ ಬಗ್ಗೆ ದೂರಿದ್ದಳು.

ವಿಡಿಯೋ ಕಾಲ್ ಮೂಲಕ ಅಘೋರಿ ಸಲಹೆ ಪಡೆದಿದ್ದರು. ಅಮವಾಸ್ಯೆ ರಾತ್ರಿ ಜಲಪಾತಕ್ಕೆ ತಲೆ ಕೊಡಿಸಿದ್ದರು. ಇದೀಗ ಮೂಳೆಪುಡಿ ನೀರಿಗೆ ಬೆರೆಸಿ ಕುಡಿ ಎಂದು ಒತ್ತಾಯಿಸಿದ್ದಾರೆ ಎಂದು ಮಹಿಳೆ ಹೇಳಿದ್ದಾರೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!