BBMP BUDGET | ಬಹುನಿರೀಕ್ಷಿತ ಬಿಬಿಎಂಪಿ ಬಜೆಟ್ ಮಂಡನೆ, ಹೈಲೈಟ್ಸ್ ಇಲ್ಲಿದೆ..

ಹೊಸದಿಗಂತ ಡಿಜಿಟಲ್ ಡೆಸ್ಕ್:

ಇಂದು ಬಹುನಿರೀಕ್ಷಿತ ಬಿಬಿಎಂಪಿ ಬಜೆಟ್ ಮಂಡನೆಯಾಗಿದ್ದು, ಬೆಂಗಳೂರಿನಲ್ಲಿ ನೂರು ಕಡೆ ಶಿ ಟಾಯ್ಲೆಟ್ಸ್ (She toilet)  ನಿರ್ಮಾಣಕ್ಕೆ ಅನುದಾನ ಮೀಸಲಿಡಲಾಗಿದೆ. ಪೌರಕಾರ್ಮಿಕರ ವಿಶ್ರಾಂತಿ ತಾಣಕ್ಕೆ ಹತ್ತು ಕೋಟಿ ರೂಪಾಯಿ ಅನುದಾನ ನೀಡಲಾಗಿದೆ.

ಇನ್ನೇನೇನಿದೆ?

11,307 ಪೌರ ಕಾರ್ಮಿಕರ ನೇರ ನೇಮಕಾತಿ

ವಿದ್ಯಾರ್ಥಿಗಳಿಗೆ ಪರಿಸರ ಕಾಳಜಿ ಮೂಡಿಸಲು ‘ಹಸಿರುರಕ್ಷಕ’ ಆ್ಯಪ್

ರಸ್ತೆ ಬದಿ, ಪಾರ್ಕ್, ಕೆರೆ ಅಂಗಳದಲ್ಲಿ 2 ಲಕ್ಷ ಸಸಿ ನೆಡಲು ನಿರ್ಧಾರ

ದಾಸರಹಳ್ಳಿ, ಯಲಹಂಕ ವಲಯದಲ್ಲಿ ಹೈಟೆಕ್ ಸಸ್ಯಕ್ಷೇತ್ರ ಸ್ಥಾಪನೆಗೆ 14 ಕೋಟಿ ರೂ. ಅನುದಾನ

ಬನ್ನೇರುಘಟ್ಟ ಉದ್ಯಾನ ವನಕ್ಕೆ 1 ಕೋಟಿ ರೂಪಾಯಿ ಘೋಷಣೆ

ಬೆಂಗಳೂರಿನಲ್ಲಿ ಹೊಸದಾಗಿ 50 ಇಂದಿರಾ ಕ್ಯಾಂಟೀನ್ ಸ್ಥಾಪನೆ

ಮೊಬೈಲ್ ಕ್ಯಾಂಟೀನ್ ಸ್ಥಾಪಿಸಲು 70 ಕೋಟಿ ರೂ. ಮೀಸಲು

ಬೆಂಗಳೂರು ನಗರದಲ್ಲಿ ವೈಟ್ ಟಾಪಿಂಗ್ ರಸ್ತೆಗೆ 800 ಕೋಟಿ ರೂ.

ವಿಶ್ವೇಶ್ವರಯ್ಯ ರೈಲ್ವೆ ಟರ್ಮಿನಲ್ ಸಂಪರ್ಕ ಮೇಲ್ಸೇತುವೆಗೆ 380 ಕೋಟಿ ರೂ.

ಸಂಯುಕ್ತ ಮೆಟ್ರೋ, ರಸ್ತೆ ಮೇಲ್ಸೇತುವೆಗೆ 100 ಕೋಟಿ ರೂ. ಅನುದಾನ.

ಘನತ್ಯಾಜ್ಯ ಸಂಗ್ರಹಣೆ, ವಿಂಗಡನೆ, ಭೂಭರ್ತಿ ಪ್ರದೇಶ ಅಭಿವೃದ್ಧಿಗೆ 1 ಸಾವಿರ ಕೋಟಿ ಮೀಸಲು.

ಮೊದಲ ಹಂತದಲ್ಲಿ ಬೇಗೂರಿನ ರಮಣಶ್ರೀ ಲೇಔಟ್​​ನಲ್ಲಿ 200 ಮನೆಗಳಿಂದ ಹಸಿ-ಒಣ ತ್ಯಾಜ್ಯ ಸಂಗ್ರಹಿಸಿ ರೀ ಸೈಕ್ಲಿಂಗ್

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!