Wednesday, December 6, 2023

Latest Posts

ಬಹುನಿರೀಕ್ಷಿತ ಸಿಯುಇಟಿ-ಯುಜಿ 2022 ಫಲಿತಾಂಶ ಪ್ರಕಟ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬಹುನಿರೀಕ್ಷಿತ ಸಿಯುಇಟಿ-ಯುಜಿ 2022 ಫಲಿತಾಂಶ ಪ್ರಕಟವಾಗಿದೆ.
ರಾಷ್ಟ್ರೀಯ ಪರೀಕ್ಷಾ ಸಂಸ್ಥೆ ಸಾಮಾನ್ಯ ವಿಶ್ವ ವಿದ್ಯಾಲಯ ಪ್ರವೇಶ ಪರೀಕ್ಷೆ ಫಲಿತಾಂಶ ಬಿಡುಗಡೆ ಮಾಡಿದ್ದು, ಸಿಯುಇಟಿ ಯುಜಿ ಅಧಿಕೃತ ವೆಬ್‌ಸೈಟ್‌ನಲ್ಲಿ ಫಲಿತಾಂಶವನ್ನು ಪಡೆಯಬಹುದಾಗಿದೆ.

ಜುಲೈ 15 ರಿಂದ ಆಗಸ್ಟ್ 30ರ ನಡುವೆ ಆರು ಹಂತದಲ್ಲಿ ಪರೀಕ್ಷೆ ನಡೆದಿತ್ತು. ದೇಶದ 259 ನಗರಗಳಲ್ಲಿ ಮತ್ತು 489 ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ನಡೆದಿದೆ.  ಈ ಪರೀಕ್ಷೆಯನ್ನು ದೇಶದ 43 ಕೇಂದ್ರೀಯ ವಿಶ್ವವಿದ್ಯಾಲಯಗಳು, 13 ರಾಜ್ಯ ವಿಶ್ವವಿದ್ಯಾಲಯಗಳು, 12 ಡೀಮ್ಡ್ ವಿಶ್ವವಿದ್ಯಾಲಯಗಳು ಮತ್ತು 18 ಖಾಸಗಿ ವಿಶ್ವವಿದ್ಯಾಲಯಗಳ ಪ್ರವೇಶಕ್ಕಾಗಿ ಮಾಡಲಾಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!