ಹೊಸದಿಗಂತ ಡಿಜಿಟಲ್ ಡೆಸ್ಕ್:
ದೇಶದಲ್ಲಿ ಇತ್ತೀಚಿನ ದಿನಗಳಲ್ಲಿ ಭಾರತ ಹೆಸರನ್ನು ಬಳಕೆ ಹೆಚ್ಚಾಗುತ್ತಿದ್ದು,ಕಾಂಗ್ರೆಸ್ ಸೇರಿದಂತೆ ವಿಪಕ್ಷಗಳ ಕಣ್ಣು ಕೆಂಪಾಗಿಸಿದೆ.
ಜಿ20 ಶೃಂಗಸಭೆಯಲ್ಲಿ ಪ್ರಸೆಡೆಂಟ್ ಆಫ್ ಭಾರತ್, ಪ್ರೈಮ್ ಮಿನಿಸ್ಟರ್ ಆಫ್ ಭಾರತ್ ಎಂದು ಉಲ್ಲೇಖಿಸಿತ್ತು ಪರವಾಗಿ ಪ್ರಚಾರ, ಅಪಸ್ವರಗಳು ವ್ಯಕ್ತವಾಗಿದೆ. ಈ ಎಲ್ಲಾ ಬೆಳವಣಿಗೆ ನಡುವೆ ಗೂಗಲ್ ಮ್ಯಾಪ್ ಇದೀಗ ಭಾರತ ಹೆಸರನ್ನು ಉಲ್ಲೇಖಿಸಿದೆ. ಗೂಗಲ್ ಮ್ಯಾಪ್‌ನಲ್ಲಿ ಭಾರತ ಎಂದು ಸರ್ಚ್ ಮಾಡಿದರೆ ತ್ರಿವರ್ಣ ಧ್ವಜ ಸೇರಿ ಭಾರತ ಮ್ಯಾಪ್ ತೋರಿಸುತ್ತದೆ.
ಇಷ್ಟು ದಿನ ಇಂಡಿಯಾ ಎಂದು ಸರ್ಚ್ ಮಾಡಿದರೆ ಮಾತ್ರ ಭಾರತದ ಮ್ಯಾಪನ್ನು ತೋರಿಸುತ್ತಿತ್ತು. ಆದರೆ ಇದೀಗ ಕನ್ನಡದಲ್ಲಿ ಭಾರತ ಅಥವಾ ಹಿಂದಿ, ಇಂಗ್ಲೀಷ್ ಸೇರಿದಂತೆ ಇತರ ಭಾಷೆಗಳಲ್ಲಿ ಸರ್ಚ್ ಮಾಡಿದರೆ ಭಾರತದ ಮ್ಯಾಪನ್ನು ಗೂಗಲ್ ತೋರಿಸುತ್ತದೆ. ವಿಶೇಷ ಅಂದರೆ ಭಾರತ ಹೆಸರಿನ ಜೊತೆಗೆ ತ್ರಿವರ್ಣ ಧ್ವಜವೂ ಪ್ರದರ್ಶಿಸುತ್ತದೆ.