ʼಆಪರೇಷನ್‌ ಸಿಂದೂರʼ ಹೆಸರೇ ಅದ್ಭುತವಾಗಿದೆ, ಶಶಿ ತರೂರ್‌ ಹೇಳಿದ್ದೇನು?

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಸಿಂಧೂರ್‌ ಪದದ ಬಗ್ಗೆ ವಾದ ವಿವಾದ ನಡೆಯುತ್ತಿರುವ ಬೆನ್ನಲ್ಲೇ ಟ್ವೀಟ್‌ ಮಾಡಿರುವ ಕಾಂಗ್ರೆಸ್‌ ಸಂಸದ ಶಶಿ ತರೂರ್‌ ʼಆಪರೇಷನ್‌ ಸಿಂದೂರʼ ಒಂದು ಅದ್ಭುತ ಹೆಸರು ಎಂದು ಹೇಳಿದ್ದಾರೆ.

ಸರ್ಕಾರವು ಸೃಷ್ಟಿಶೀಲ ಸಂಕ್ಷಿಪ್ತ ರೂಪಗಳನ್ನು ಬಳಸುತ್ತದೆ. ಪಹಲ್ಗಾಮ್‌ನಲ್ಲಿ ಹತ್ಯೆಯಾದ ನೇವಿ ಆಫೀಸರ್‌ ಪತ್ನಿ ತನ್ನ ಗಂಡನ ಪಕ್ಕದಲ್ಲಿ ಅಳುತ್ತಿರುವ ವಿಧವೆಯ ಚಿತ್ರಣವನ್ನು ಇದು ನೆನಪಿಸುತ್ತದೆ. ಈ ಕಾರಣಕ್ಕಾಗಿಯೇ, ಪಾಕಿಸ್ತಾನದ ಮೇಲೆ ಭಾರತದ ಕಾರ್ಯಾಚರಣೆ ಅಗತ್ಯವಾಗಿತ್ತು. ಸಿಂಧೂರವು ರಕ್ತದ ಬಣ್ಣವನ್ನು ಹೋಲುತ್ತದೆ. ಇದು ಒಂದು ಸ್ಪಷ್ಟ ಸಂದೇಶವನ್ನು ರವಾನಿಸುತ್ತದೆ. ಈ ಹೆಸರನ್ನು ಯಾರು ಸೂಚಿಸಿರುವವರಿಗೆ ಅವರಿಗೆ ಅಭಿನಂದನೆಗಳು ಎಂದು ತರೂರ್ ಹೇಳಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!