ಶೀಘ್ರ 10 ಕೋಟಿ ದಾಟಲಿದೆ ದೇಶದಲ್ಲಿ ಸಿರಿವಂತರ ಸಂಖ್ಯೆ: ಗೋಲ್ಡ್‌ಮನ್ ಭವಿಷ್ಯ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಶುಭಸುದ್ದಿ! ದೇಶದಲ್ಲಿ 2027ರ ವೇಳೆಗೆ ಸಿರಿವಂತರ ಸಂಖ್ಯೆ ಬರೋಬ್ಬರಿ 10 ಕೋಟಿಗೆ ಏರಲಿದೆ! ಹೀಗೊಂದು ಅಧ್ಯಯನ ವರದಿಯನ್ನು ಗೋಲ್ಡ್‌ಮನ್ ಬಿಡುಗಡೆ ಮಾಡಿದೆ.

ಭಾರತರದಲ್ಲಿ ಹೆಚ್ಚು ಆದಾಯ ಗಳಿಸುವ, ಖರೀದಿಸುವ ಶಕ್ತಿ ಹೆಚ್ಚಾಗುತ್ತಿದೆ. ಇದಕ್ಕೆ ಬಲಿಷ್ಠ ಆರ್ಥಿಕ ಬೆಳವಣಿಗೆ, ಸ್ಥಿರವಾದ ಹಣಕಾಸು ನೀತಿ ಹಾಗೂ ಉನ್ನತ ಸಾಲ ಬೆಳವಣಿಗೆ ಕಾರಣವಾಗಿದೆ ಎಂದು ವರದಿ ಹೇಳಿದೆ.

2015ರಲ್ಲಿ ವಾರ್ಷಿಕ 8.28ಲಕ್ಷ ರೂಪಾಯಿಗಿಂತ ಅಧಿಕ ಆದಾಯ ಗಳಿಸುವವರ ಸಂಖ್ಯೆ 2.4 ಕೋಟಿ ಇತ್ತು. ಇದು ಈಗ 6 ಕೋಟಿಗೆ ಏರಿದೆ. ಭಾರತ ಪ್ರಸ್ತುತ ಜಗತ್ತಿನ ಐದನೇ ದೊಡ್ಡ ಆರ್ಥಿಕತೆಯಾಗಿರುವ ದೇಶವಾಗಿದೆ. 2027ರ ವೇಳೆಗೆ ಇದು ಮೂರನೇ ಸ್ಥಾನಕ್ಕೇರಲು ಸಜ್ಜಾಗಿದೆ ಎಂದು ವರದಿ ಹೇಳಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!