ರಾಮಚರಿತ ಮಾನಸ: ಪೂರೈಕೆ ಸಾಧ್ಯವಾಗದೆ ಉಚಿತ ಡೌನ್ಲೋಡ್‌ಗೆ ಅವಕಾಶ ಕೊಟ್ಟ ಗೀತಾ ಪ್ರೆಸ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಅಯೋಧ್ಯೆಯಲ್ಲಿ ರಾಮಲಲಾ ಪ್ರಾಣಪ್ರತಿಷ್ಠ ಹಿನ್ನೆಲೆಯಲ್ಲಿ ದೇಶದ ಮೂಲೆಮೂಲೆಗಳಲ್ಲಿಯೂ ರಾಮಜಪ ಮೊಳಗುತ್ತಿದ್ದು, ರಾಮಚರಿತ ಮಾನಸ ಪುಸ್ತಕಕ್ಕೆ ಈಗ ಎಲ್ಲಿಲ್ಲದ ಬೇಡಿಕೆ ಬಂದಿದೆ!

ಬೇಡಿಕೆಗೆ ಪೂರಕವಾಗಿ ಪುಸ್ತಕ ಮುದ್ರಣ ಸಾಧ್ಯವಾಗದೆ ದೇಶದ ಪ್ರತಿಷ್ಠಿತ ಗೀತಾ ಪ್ರೆಸ್, ಈ ಪುಸ್ತಕವನ್ನು ತಮ್ಮ ವೆಬ್‌ಸೈಟ್‌ನಲ್ಲಿ ಉಚಿತ ಡೌನ್‌ಲೋಡ್ ಮಾಡಿಕೊಳ್ಳಲು ಅವಕಾಶ ನೀಡಿದೆ.

ಕಳೆದ ೨೦೨೨ರಿಂದ ಸುಮಾರು 75 ಸಾವಿರ ರಾಮಚರಿತ ಮಾನಸ ಪುಸ್ತಕವನ್ನು ಗೀತಾ ಪ್ರೆಸ್ ಪ್ರಕಟಿಸಿದೆ. ರಾಮಲಲಾ ವಿಗ್ರಹ ಪ್ರಾಣ ಪ್ರತಿಷ್ಠಾಪನೆ ದಿನ ನಿಗದಿಯಾದ ಕ್ಷಣದಿಂದ ಈ ಪುಸ್ತಕಕ್ಕೆ ಇನ್ನಿಲ್ಲದ ಬೇಡಿಕೆ ಬರುತ್ತಿದೆ. ಬೇಡಿಕೆಗೆ ಪೂರಕವಾದ ಮುದ್ರಣ, ವಿತರಣೆ ಸಾಧ್ಯವಾಗುತ್ತಿಲ್ಲ.

ಒಂದು ಲಕ್ಷ ಪುಸ್ತಕಗಳನ್ನು ಮತ್ತೆ ಮುದ್ರಣ ಮಾಡಲಾಗಿದ್ದರೂ ಬೇಡಿಕೆ ಕಡಿಮೆಯಾಗಿಲ್ಲ ಎಂದಿರುವ ಗೀತಾ ಪ್ರೆಸ್‌ನ ವ್ಯವಸ್ಥಾಪಕ ಲಾಲ್‌ಮಣಿ ತ್ರಿಪಾಠಿ, ಮಂಗಳವಾರದಿಂದ ಓದುಗರಿಗೆ ಉಚಿತವಾಗಿ ಡೌನ್‌ಲೋಡ್ ಅವಕಾಶ ಕಲ್ಪಿಸಲಾಗುತ್ತಿದೆ.

ಇದು ಮುಂದಿನ 15 ದಿನ ಲಭ್ಯವಿರಲಿದೆ. ಟ್ಟು 50 ಸಾವಿರ ಜನ ಇದನ್ನು ಡೌನ್‌ಲೋಡ್ ಮಾಡಿಕೊಳ್ಳಬಹುದಾಗಿದ್ದು. ಬೇಡಿಕೆ ಹೆಚ್ಚಿದರೆ ಇದರ ಸಾಮರ್ಥ್ಯವನ್ನು ಒಂದು ಲಕ್ಷಕ್ಕೆ ಏರಿಕೆ ಮಾಡಲಾಗುವುದು ಎಂದು ಹೇಳಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!