ದೇಶದಲ್ಲಿ ಹೆಚ್ಚುತ್ತಿದೆ ಸೆಕೆಯ ಪ್ರಮಾಣ: ಮತಗಟ್ಟೆಗಳಲ್ಲಿ ಅಲರ್ಟ್ ಆಗಿರಲು ಚುನಾವಣಾ ಆಯೋಗ ಸೂಚನೆ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ದೇಶದಲ್ಲಿ ಸೆಕೆ ತೀವ್ರವಾಗಿರಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಎಚ್ಚರಿಸಿದ ಬೆನ್ನಲ್ಲೇ ಮತಗಟ್ಟೆಗಳಲ್ಲಿ ಕನಿಷ್ಠ ಸೌಲಭ್ಯಗಳು, ಕುಡಿಯುವ ನೀರು, ನೆರಳು ಮತ್ತು ವೈದ್ಯಕೀಯ ಉಪಕರಣಗಳನ್ನು ಒದಗಿಸಲೇಬೇಕು ಎಂದು ಚುನಾವಣಾ ಆಯೋಗ ಖಡಕ್ ಸೂಚನೆ ನೀಡಿದೆ.

ಎನ್‌ಡಿಎಂಎ ಹೊರಡಿಸಿರುವ ಸೂಚನೆಗಳನ್ನು ಆಯೋಗವು ವಿವಿಧ ರಾಜ್ಯಗಳ ಮುಖ್ಯ ಚುನಾವಣಾ ಅಧಿಕಾರಿಗಳಿಗೆ (ಸಿಇಒ) ರವಾನಿಸಿದೆ.

2023ರ ಜೂನ್‌ನಲ್ಲಿ ಹೊರಡಿಸಿದ್ದ ಸೂಚನೆಯಲ್ಲಿ, ಪ್ರತಿ ಮತಗಟ್ಟೆಯಲ್ಲಿಯೂ ಒಆರ್‌ಎಸ್‌ ಲಭ್ಯವಿರಬೇಕು, ಮತಗಟ್ಟೆಯ ಸಿಬ್ಬಂದಿಗೆ ಹಾಗೂ ಯಾವುದೇ ಮತದಾರನಿಗೆ ಅಗತ್ಯ ಎದುರಾದರೆ ನೀಡಲು ಇದನ್ನು ಇರಿಸಿಕೊಳ್ಳಬೇಕು ಎಂದು ಹೇಳಲಾಗಿತ್ತು. ಅದೇ ಸೂಚನೆಯನ್ನು ಈಗ ಮತ್ತೆ ನೀಡಲಾಗಿದೆ.

‘ಸನ್‌ ಸ್ಟ್ರೋಕ್ ಸಂದರ್ಭದಲ್ಲಿ ಪಾಲಿಸಬೇಕಾದ ನಿಯಮಗಳನ್ನು ಎಲ್ಲ ಮತಗಟ್ಟೆಗಳಿಗೆ ರವಾನಿಸಬಹುದು. ನಿರ್ಜಲೀಕರಣದ ಅಪಾಯದಿಂದ ರಕ್ಷಿಸಿಕೊಳ್ಳಲು ಒದ್ದೆ ಟವೆಲ್ ತರುವಂತೆ ಮತದಾರರಿಗೆ ಸೂಚಿಸಬಹುದು, ಉಷ್ಣಾಂಶ ಹೆಚ್ಚಿದ್ದಾಗ ಮತಗಟ್ಟೆಗಳಿಗೆ ಮಕ್ಕಳನ್ನು ಕರೆತರದಂತೆ ಮಹಿಳಾ ಮತದಾರರಿಗೆ ಸೂಚಿಸಬಹುದು’ ಎಂದು ತಿಳಿಸಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!