ದೆಹಲಿ ಸಿಎಂ ಕೇಜ್ರಿವಾಲ್ ಬಂಧನ: ಮುಕ್ತ, ಪಾರದರ್ಶಕ ತನಿಖೆಯಾಗಲಿ ಎಂದ ಅಮೆರಿಕ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ದೆಹಲಿ ಮದ್ಯ ನೀತಿ ಪ್ರಕರಣದಲ್ಲಿ ಇಡಿಯಿಂದ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಬಂಧನವಾಗಿದ್ದು, ದೇಶದಲ್ಲಿ ಪರ ವಿರೋಧಗಳ ಚರ್ಚೆಗಳು ಜೋರಾಗಿ ನಡೆಯುತ್ತಿದೆ.

ಇತ್ತ ಈ ಕುರಿತಾಗಿ ಅಮೆರಿಕ ಸರ್ಕಾರ ಎಲ್ಲ ವರದಿಗಳನ್ನೂ ಗಮನಿಸುತ್ತಿದೆ ಎಂದು ಅಮೆರಿಕ ವಿದೇಶಾಂಗ ಇಲಾಖೆ ವಕ್ತಾರರು ಹೇಳಿದ್ದಾರೆ.

ಭಾರತ ಸರ್ಕಾರವು ಸಿಎಂ ಕೇಜ್ರಿವಾಲ್ ಬಂಧನ ಕುರಿತಾದ ತನಿಖೆಯನ್ನು ಕಾನೂನು ಪ್ರಕ್ರಿಯೆಯು ಮುಕ್ತ ಹಾಗೂ ಪಾರದರ್ಶಕವಾಗಿ ನಡೆಸಿಕೊಳ್ಳುತ್ತದೆ ಎಂಬ ವಿಶ್ವಾಸವಿದೆ ಎಂದು ಅಮೆರಿಕ ಅಭಿಪ್ರಾಯಪಟ್ಟಿದೆ.

ಕೆಲವು ದಿನಗಳ ಹಿಂದೆ ಕೇಜ್ರಿವಾಲ್ ಅವರ ಬಂಧನ ಪ್ರಕರಣ ಸಂಬಂಧ ಸರ್ಕಾರ ನ್ಯಾಯಸಮ್ಮತ ಹಾಗೂ ಪಕ್ಷಪಾತ ರಹಿತ ತನಿಖೆ ನಡೆಸಲಿದೆ ಎಂಬ ವಿಶ್ವಾಸವಿದೆ ಎಂದು ಜರ್ಮನಿ ದೇಶದ ವಿದೇಶಾಂಗ ಕಚೇರಿ ಕೂಡಾ ಹೇಳಿತ್ತು. ಇದೀಗ ಅಮೆರಿಕ ಕೂಡ ಕೇಜ್ರಿವಾಲ್ ಬಂಧನದ ಕುರಿತಾಗಿ ಭಾರತ ಸರ್ಕಾರಕ್ಕೆ ತನ್ನ ಸಲಹೆ ನೀಡಿದೆ.

ಜರ್ಮನಿ ನೀಡಿದ್ದ ಹೇಳಿಕೆಗೆ ಭಾರತದಲ್ಲಿ ತೀವ್ರ ವಿರೋಧ ವ್ಯಕ್ತವಾಗಿತ್ತು. ದೆಹಲಿಯಲ್ಲಿರುವ ಜರ್ಮನ್ ರಾಯಭಾರಿ ಎದುರು ತನ್ನ ಪ್ರತಿಭಟನೆ ದಾಖಲಿಸಿದೆ. ಜರ್ಮನಿಯ ಹೇಳಿಕೆಯು ‘ಭಾರತದ ಆಂತರಿಕ ವಿಷಯದಲ್ಲಿನ ಲಜ್ಜೆಗೇಡಿ ಹಸ್ತಕ್ಷೇಪ’ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಚಾಟಿ ಬೀಸಿತ್ತು.

ಅಮೆರಿಕ ವಿದೇಶಾಂಗ ಇಲಾಖೆಯ ಈ ಹೇಳಿಕೆಗೆ ಈವರೆಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!