Thursday, December 8, 2022

Latest Posts

ಗರ್ಬಾ ನೃತ್ಯಕ್ಕೆ ಮನಸೋತು ವಿಡಿಯೊ ಟ್ವೀಟ್ ಮಾಡಿದ್ರು ಒಲಾ ಮುಖ್ಯಸ್ಥ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ನವರಾತ್ರಿ ಉತ್ಸವ ಭಾರತದಾದ್ಯಂತ ಆಚರಿಸಲಾಗುತ್ತದೆ. ಶಕ್ತಿ ಮಾತೆಯನ್ನು ಒಂಭತ್ತು ದಿನಗಳ ಕಾಲ ವಿವಿಧ ರಾಜ್ಯಗಳಲ್ಲಿ ವಿವಿಧ ರೂಪಗಳಲ್ಲಿ ಆಚರಣೆ ಮಾಡಲಾಗುತ್ತದೆ. ಅದರಲ್ಲೂ ಗುಜರಾತ್‌ನ ಗಾರ್ಬೋ ಎಂದೂ ಕರೆಯಲ್ಪಡುವ ಮಣ್ಣಿನ ಪಾತ್ರೆಯಲ್ಲಿ ಇರಿಸಲಾದ ದೀಪದ ಪಕ್ಕದಲ್ಲಿ ದೇವಿಯನ್ನು ಸ್ತುತಿಸುವ ಭಜನೆಗಳನ್ನು ಹಾಡುತ್ತಾ ಹೆಜ್ಜೆ ಹಾಕುತ್ತಾರೆ. ಇದನ್ನು ಗರ್ಬಾ ನೃತ್ಯ ಎಂದೇ ಪ್ರಸಿದ್ದಿ ಪಡೆದಿದೆ. ಈ ಬಾರಿ ನವರಾತ್ರಿಯ ಸಂದರ್ಭದಲ್ಲಿ ಗುಜರಾತ್‌ನ ವಡೋದರಾದಲ್ಲಿ ನಡೆದ ಗರ್ಬಾ ನೃತ್ಯ ಎಲ್ಲರ ಗಮನ ಸೆಳೆದಿದೆ.

ಈ ಅದ್ಭುತವನ್ನು ದೃಶ್ಯವನ್ನು ಟ್ವೀಟ್‌ ಮಾಡಿದ ಒಲಾ ಮುಖ್ಯಸ್ಥ ಭವಿಷ್‌ ಅಗರ್‌ವಾಲ್‌, ನೃತ್ಯಕ್ಕೆ ಮನಸೋತಿದ್ದಾರೆ. 50,000 ಜನರು ಈ ರೀತಿಯಲ್ಲಿ ಒಂದೇ ಸಿಂಕ್‌ನಲ್ಲಿ ನೃತ್ಯ ಮಾಡುವುದನ್ನು ವಿಶ್ವದಲ್ಲಿ ಬೇರೆ ಯಾವುದೇ ಸ್ಥಳದಲ್ಲಿ ನೋಡಲು ಸಾಧ್ಯವಿಲ್ಲ ಎಂದು ಬರೆದುಕೊಂಡಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!