ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ವಿರುದ್ಧ ರಣತಂತ್ರ ರೂಪಿಸಲು ವಿಪಕ್ಷಗಳು ಸಜ್ಜು!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಮುಂದಿನ ಲೋಕಸಭಾ ಚುನಾವಣೆಯಲ್ಲಿ (Lok Sabha election) ಬಿಜೆಪಿಯನ್ನು (BJP ಸೋಲಿಸಲು ವಿಪಕ್ಷಗಳು (Opposition parties) ದ್ವಿಮುಖವಾಗಿ ಮಾತ್ರ ಪೈಪೋಟಿ ಇರುವಂತೆ ಯೋಜನೆ ರೂಪಿಸುತ್ತಿವೆ.ಈ ಸಂಬಧ ಚಕ್ರವ್ಯೂಹ ರಚಿಸಲು ಮಹೂರ್ತ ಫಿಕ್ಸ್ ಮಾಡಿವೆ.

450 ಲೋಕಸಭಾ ಕ್ಷೇತ್ರಗಳಲ್ಲಿ ಬಿಜೆಪಿ ಎದುರು ಸರ್ವಸಮ್ಮತ ಅಭ್ಯರ್ಥಿಗಳನ್ನು ಕಣಕ್ಕಿಳಿಸುವ ತಂತ್ರ ನಡೆಯುತ್ತಿವೆ. ಬಿಜೆಪಿ ವಿರೋಧಿ ಮತಗಳು ಛಿದ್ರವಾಗುವುದನ್ನು ತಪ್ಪಿಸಲು ಈ ರೀತಿಯ ವ್ಯೂಹ ರಚನೆ ಮಾಡಲಾಗುತ್ತಿದೆ.

ಈ ವಿಚಾರವಾಗಿ ಜೂ.23ರಂದು ಪಾಟ್ನಾದಲ್ಲಿ ವಿಪಕ್ಷಗಳೆಲ್ಲಾ ಸೇರಿ ಸಭೆ ಮಾಡಲು ನಿರ್ಧರಿಸಿವೆ. ಬಿಹಾರದ (Bihar) ಸಿಎಂ ನಿತೀಶ್ ಕುಮಾರ್ ನೇತೃತ್ವದಲ್ಲಿ ಪಾಟ್ನಾದಲ್ಲಿ ನಡೆಯುವ ಈ ಸಭೆಗೆ ಎಐಸಿಸಿ ಅಗ್ರನಾಯಕ ರಾಹುಲ್ ಗಾಂಧಿ, ಮಮತಾ ಬ್ಯಾನರ್ಜಿ, ಎಂಕೆ ಸ್ಟಾಲಿನ್, ಅರವಿಂದ್ ಕೇಜ್ರಿವಾಲ್, ಶರದ್ ಪವಾರ್, ಅಖಿಲೇಶ್ ಯಾದವ್, ಉದ್ಧವ್ ಠಾಕ್ರೆ, ಹೇಮಂತ್ ಸೋರೆನ್, ತೇಜಸ್ವಿ ಯಾದವ್, ಸಿಪಿಐ, ಸಿಪಿಎಂ ಪಕ್ಷಗಳ ನಾಯಕರು ಪಾಲ್ಗೊಳ್ಳಲಿದ್ದಾರೆ.

- Advertisement - Ply
Nova

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!