ಹೊಸದಿಗಂತ ಡಿಜಿಟಲ್ ಡೆಸ್ಕ್:
ಪ್ರತಿದಿನ ಕೋಟ್ಯಂತರ ಜನರು ಭಾರತೀಯ ರೈಲ್ವೆಯಲ್ಲಿ ಪ್ರಯಾಣಿಸುತ್ತಾರೆ. ಈ ವೇಳೆ ಪ್ರತಿಯೊಬ್ಬ ಪ್ರಯಾಣಿಕರ ಅಗತ್ಯಗಳನ್ನು ಪೂರೈಸಲು ರೈಲ್ವೆ ತನ್ನಿಂದಾದಷ್ಟು ಪ್ರಯತ್ನಿಸುತ್ತದೆ.
ನಿಮ್ಮ ಮನೆಯಲ್ಲಿರುವ ಹಿರಿಯರಿಗೆ ಅಥವಾ ವಯಸ್ಸಾದವರಿಗೆ ರೈಲಿನಲ್ಲಿ ಆರಾಮವಾಗಿ ಪ್ರಯಾಣಿಸಲ ವಿಶೇಷ ಸೌಲಭ್ಯಗಳು ಸಿಗುತ್ತವೆ. ಅದರಲ್ಲೂ ವಯಸ್ಸಾದವರಿಗೆ ಟಿಕೆಟ್ ಬುಕ್ ಮಾಡುವಾಗ ಲೋವರ್ ಬರ್ತ್ ವ್ಯವಸ್ಥೆ ನೀಡುತ್ತೆ. ಅದ್ರ ಜೊತೆಗೆ ವಯಸ್ಸಾದವರಿಗೆ ರೈಲ್ವೆ ಹಲವು ನಿಯಮಗಳನ್ನು ರೂಪಿಸಿದೆ. ಇದು ಅವರ ಪ್ರಯಾಣವನ್ನು ಸುಲಭಗೊಳಿಸುತ್ತದೆ.
ಅದೇ ರೀತಿ ಒಬ್ಬ ಪ್ರಯಾಣಿಕ ತನ್ನ ಮಾವನಿಗೆ ರೈಲು ಟಿಕೆಟ್ ಬುಕ್ ಮಾಡಿದ್ದಾಗಿ ಮತ್ತು ಅವರ ಕಾಲುಗಳಲ್ಲಿ ಸಮಸ್ಯೆ ಇದ್ದ ಕಾರಣ ಕೆಳಗಿನ ಬರ್ತ್‌ಗೆ ಆದ್ಯತೆ ನೀಡಿದ್ದಾಗಿ, ಆದರೆ ಆಗಲೂ ರೈಲ್ವೆ ಅವರಿಗೆ ಮೇಲಿನ ಬರ್ತ್ ನೀಡಿದೆ ಎಂದು ಒಬ್ಬ ಪ್ರಯಾಣಿಕ ಟ್ವೀಟ್ ಮಾಡಿದ್ದಾರೆ.
ಇದಕ್ಕೆ ಪ್ರತಿಕ್ರಿಯಿಸಿದ ರೈಲ್ವೆ, ಸಾಮಾನ್ಯ ಕೋಟಾದಲ್ಲಿ ಟಿಕೆಟ್ ಬುಕ್ ಮಾಡಿದರೆ, ಸೀಟು ಲಭ್ಯವಿದ್ದರೆ ಮಾತ್ರ ಸೀಟು ಹಂಚಿಕೆ ಸಿಗುತ್ತದೆ, ಇಲ್ಲದಿದ್ದರೆ ಸಿಗುವುದಿಲ್ಲ ಎಂದು ಹೇಳಿದೆ. ಲೋವರ್ ಬರ್ತ್ ಆಯ್ಕೆಯನ್ನು ಬಳಸಿಕೊಂಡು ಬುಕ್ ಮಾಡಿದರೆ, ನಿಮಗೆ ಲೋವರ್ ಬರ್ತ್ ಸಿಗುತ್ತದೆ ಎಂದೂ ಹೇಳಿದೆ.
ಸಾಮಾನ್ಯ ಕೋಟಾದಲ್ಲಿ ಬುಕ್ ಮಾಡುವವರಿಗೆ, ಲೋವರ್ ಬರ್ತ್ ಲಭ್ಯತೆಯನ್ನು ಅವಲಂಬಿಸಿ ಮಾತ್ರ ಹಂಚಿಕೆ ಮಾಡಲಾಗುತ್ತದೆ ಎಂದು ರೈಲ್ವೆ ತಿಳಿಸಿದೆ. ಈ ಸೀಟುಗಳನ್ನು ಮೊದಲು ಬಂದವರಿಗೆ ಮೊದಲ ಆದ್ಯತೆಯ ಆಧಾರದ ಮೇಲೆ ನೀಡಲಾಗುತ್ತದೆ. ಸಾಮಾನ್ಯ ಕೋಟಾದಲ್ಲಿ ಬುಕ್ ಮಾಡುವುದರಲ್ಲಿ ಯಾವುದೇ ಹಸ್ತಕ್ಷೇಪ ಇಲ್ಲ, ಅದು ಸ್ವಯಂಚಾಲಿತವಾಗಿ ಕಾರ್ಯನಿರ್ವಹಿಸುತ್ತದೆ. ಆದರೆ, ಲೋವರ್ ಬರ್ತ್ ಸಿಗದವರು, ಟಿಟಿಇ ಅವರನ್ನು ಸಂಪರ್ಕಿಸಿ ಲೋವರ್ ಬರ್ತ್‌ಗೆ ವಿನಂತಿಸಬಹುದು. ಅಥವಾ ಪ್ರಯಾಣಿಕರೇ ಲೋವರ್ ಬರ್ತ್‌ಗೆ ಬದಲಾಯಿಸಿಕೊಳ್ಳಲು ಮಾತುಕತೆ ನಡೆಸಬಹುದು.