PHOTO | ಮಧ್ಯಾಹ್ನ ಆಪರೇಷನ್‌ ಇದ್ರೂ ತಪ್ಪದೇ ವೋಟ್‌ ಹಾಕಿದ ಪೇಷೆಂಟ್‌!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಬಿಸಿಲು ಎಂದೋ, ಯಾರ್‌ ವೋಟ್‌ ಮಾಡ್ತಾರೆ ಎಂದೋ, ಕ್ಯೂನಲ್ಲಿ ನಿಲ್ಲೋಕೆ ಇಷ್ಟ ಇಲ್ಲ ಎಂದೋ ಎಷ್ಟೋ ಮಂದಿ ಮತದಾನವನ್ನೇ ಸ್ಕಿಪ್‌ ಮಾಡ್ತಾರೆ. ಅಂಥವರು ಈ ಸುದ್ದಿ ಓದ್ಲೇಬೇಕು.

ರಾಜಧಾನಿ ಬೆಂಗಳೂರಿನಲ್ಲಿ 39 ವರ್ಷದ ಹೆಚ್.ಎನ್ ಮುರಳೀಧರ್ ಅವರು ಮಧ್ಯಾಹ್ನ ಆಪರೇಷನ್‌ ಇದ್ದರೂ ಬಂದು ಮತದಾನ ಮಾಡಿ ನಂತರ ಹಾಸ್ಪಿಟಲ್‌ನಲ್ಲಿ ಅಡ್ಮಿಟ್‌ ಆಗಿದ್ದಾರೆ.

ಮುರಳೀದರ್ ಇಚ್ಛೆಯಂತೆ ಆಸ್ಪತ್ರೆಯ ವೈದ್ಯರು ಮತ ಹಾಕಲು ಅನುವು ಮಾಡಿಕೊಟ್ಟಿದ್ದು, ಮುರುಳೀಧರ್‌ ಆಂಬುಲೆನ್ಸ್‌ನಲ್ಲಿ  ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಹೊಸಕೋಟೆಗೆ ಬಂದು ತಮ್ಮ ಹಕ್ಕು ಚಲಾಯಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!