September 27, 2026
Sunday, September 27, 2026
spot_img

ಚಿಂತೆ ಬಿಡಿ, ತಿಂಡಿ ಮಾಡಿ 15 | ಚಳಿ ಚಳಿ ವೆದರ್‌ಗೆ ಪರ್ಫೆಕ್ಟ್‌ ಪ್ರೋಟೀನ್‌ ತಿಂಡಿ ಹೆಸರುಕಾಳಿನ ರವಾ ದೋಸೆ

ಸಾಮಾಗ್ರಿಗಳು
ಹೆಸರುಕಾಳು
ಅಕ್ಕಿ
ಶುಂಠಿ
ಹಸಿಮೆಣಸು
ಉಪ್ಪು
ರವೆ
ಓಂಕಾಳು
ಈರುಳ್ಳಿ
ಕೊತ್ತಂಬರಿ

ಮಾಡುವ ವಿಧಾನ
ಮೊದಲು ಒಂದು ಲೋಟ ಹೆಸರುಕಾಳಿಗೆ, ಒಂದು ಲೋಟ ಅಕ್ಕಿಯಂತೆ ಅದನ್ನು ತೊಳೆದು ನೆನೆಸಿಕೊಳ್ಳಿ
ರಾತ್ರಿ ನೆನೆಸಿದ ನಂತರ ಬೆಳಗ್ಗೆ ಅದಕ್ಕೆ ಶುಂಠಿ, ಹಸಿಮೆಣಸು ಹಾಕಿ, ಉಪ್ಪು ಹಾಕಿ ರುಬ್ಬಿ
ನಂತರ ಈರುಳ್ಳಿ, ಓಂಕಾಳು, ಕೊತ್ತಂಬರಿ ಸೊಪ್ಪು, ರವೆ ಹಾಕಿ ಮಿಕ್ಸ್‌ ಮಾಡಿ
ತೆಳುವಾದ ದೋಸೆ ಮಾಡಿ ಜೊತೆಗೆ ಕಾಯಿಚಟ್ನಿ ಜೊತೆ ಸವಿಯಿರಿ

Must Read