ಹೊಸದಿಗಂತ ವರದಿ ವಿಜಯಪುರ:
ಯುವಕನೊಬ್ಬನ ಕೊಲೆ ಮಾಡಿ ಹೂಳಲು ಯತ್ನಿಸಿ, ಅರೆಬರೆ ಮಣ್ಣು ಶವದ ಮೇಲೆ ಹಾಕಿ, ದುಷ್ಕರ್ಮಿಗಳು ಪರಾರಿಯಾಗಿರುವ ಘಟನೆ ಇಲ್ಲಿನ ಕೀರ್ತಿ ನಗರದ ಖಬರಸ್ತಾನದಲ್ಲಿ ನಡೆದಿದೆ.
ಮೃತಪಟ್ಟವನನ್ನು ಬಾಗಲಕೋಟೆ ತಾಲೂಕಿನ ಶಿರೂರ ಗ್ರಾಮದ ಶಿವರಾಜ ಶಿರಾಳಶೆಟ್ಟಿ (34) ಎಂದು ಗುರುತಿಸಲಾಗಿದೆ. ಕೊಲೆಯಾದ ಶಿವರಾಜ ಶಿರಾಳಶೆಟ್ಟಿ ಬಳಿ ಇದ್ದ, ಲೈಸನ್ಸ್ ಮೇಲೆ ಈತನ ಗುರುತು ಪತ್ತೆಯಾಗಿದೆ.
ನಿನ್ನೆ ಮಧ್ಯಾಹ್ನ ಕೆಲವರು ಈ ಖಬರಸ್ತಾನದಲ್ಲಿಯೇ ಪಾರ್ಟಿ ಮಾಡುತ್ತಿದ್ದರು ಎಂದು ಸ್ಥಳೀಯರು ತಿಳಿಸಿದ್ದಾರೆ. ಸ್ಥಳಕ್ಕೆ ಡಿವೈಎಸ್ಪಿ ಬಸವರಾಜ ಯಲಗಾರ ಸೇರಿದಂತೆ ಹಿರಿಯ ಅಧಿಕಾರಿಗಳ ಭೇಟಿ ನೀಡಿ ಪರಿಶೀಲಿಸಿದರು. ಜಲನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.