October 14, 2026
Wednesday, October 14, 2026
spot_img

ಕಾರು ತಗೊಂಡು ಹೋದವನು ರಿಟರ್ನ್ ಬರಲೇ ಇಲ್ಲ: ಅಂಕೋಲಾ ಪೊಲೀಸ್ ಠಾಣೆ ಮೆಟ್ಟಿಲೇರಿದ ಮಾಲೀಕ

ಹೊಸದಿಗಂತ ವರದಿ ಅಂಕೋಲಾ:

ಒಂದು ದಿನದ ಅಗತ್ಯತೆಗೆಂದು ಪರಿಚಯಸ್ಥರಿಂದ ಕಾರನ್ನು ತೆಗೆದುಕೊಂಡು ಹೋಗಿದ್ದ ವ್ಯಕ್ತಿ ಕಾರನ್ನು ಮರಳಿಸದೇ ಸಂಪರ್ಕಕ್ಕೂ ಸಿಗದಿರುವ ಕಾರಣ ಕಾರಿನ ಮಾಲಿಕ ಅಂಕೋಲಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ತಾಲೂಕಿನ ಹಿಲ್ಲೂರಿನ ನಿವಾಸಿ ಅರೀಫ್ ರಶೀದಸಾಬ್ ಎಂಬಾತನೇ ಕಾರನ್ನು ತೆಗೆದುಕೊಂಡು ಹೋಗಿ ನಾಪತ್ತೆಯಾಗಿರುವ ವ್ಯಕ್ತಿಯಾಗಿದ್ದಾನೆ. ಈತ ಹಿಲ್ಲೂರು ಪಡುಗೇರಿ ನಿವಾಸಿ ನಾಗೇಶ ರಮಾನಂದ ನಾಯಕ ಎನ್ನುವವರಿಂದ ಅಕ್ಟೋಬರ 9 ರಂದು ಸಂಜೆ ಸ್ವಂತ ಉಪಯೋಗಕ್ಕಾಗಿ ಒಂದು ದಿನದ ಮಟ್ಟಿಗೆ ಕಾರಿನ ಅಗತ್ಯತೆ ಇದೆ ಎಂದು ಕೆ.ಎ31ಎಂ3297ನೋಂದಣಿ ಸಂಖ್ಯೆಯ ಟಾಟಾ ಇಂಡಿಕಾ ಕಾರನ್ನು ಪಡೆದುಕೊಂಡಿದ್ದನ್ನು.

ಇದನ್ನೂ ಓದಿ:

 ಪರಿಚಯಸ್ಥ ಆಗಿರುವುದರಿಂದ ನಾಗೇಶ ತಮ್ಮ ಕಾರನ್ನು ಆತನಿಗೆ ನೀಡಿದ್ದರು. ಆದರೆ ಮರುದಿನ ಕಾರನ್ನು ಮರಳಿಸದೇ ಇರುವುದರಿಂದ ಆರೋಪಿತನಿಗೆ ಕರೆ ಮಾಡಿದರೆ ಆತನ ಮೊಬೈಲ್ ಸ್ವಿಚ್ ಆಫ್ ಆಗಿದ್ದು ಇಲ್ಲಿಯವರೆಗೆ ಆತನನ್ನು ಸಂಪರ್ಕಿಸಲು ಪ್ರಯತ್ನಿಸಿ ಸಾಧ್ಯವಾಗದೇ ಇರುವುದರಿಂದ ಮೋಸ ಮಾಡುವ ಉದ್ದೇಶದಿಂದ ಕಾರನ್ನು ಮರಳಿಸದೇ ನಾಪತ್ತೆ ಆಗಿರುವ ಕುರಿತಂತೆ ಅರೀಫ್ ರಶೀದ ಸಾಬ್ ಎಂಬಾತನ ಮೇಲೆ ದೂರು ದಾಖಲಿಸಲಾಗಿದೆ.

ಪ್ರಕರಣ ದಾಖಲಿಸಿದ ಅಂಕೋಲಾ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

Must Read