ಹೊಸದಿಗಂತ ಡಿಜಿಟಲ್ ಡೆಸ್ಕ್ :
ತಮಿಳುನಾಡು ರಾಜಕೀಯದಲ್ಲಿ ಈಗ ಸದ್ದು ಮಾಡುತ್ತಿರುವ ವಿಚಾರ ಅಂದರೆ ಮಾಜಿ ಸಿಎಂ ಕರುಣಾನಿಧಿ ಮರಿ ಮಗ, ಹಾಲಿ ಸಿಎಂ ಸ್ಟಾಲಿನ್ ಮೊಮ್ಮಗ, ನಟ- ಸಚಿವ ಉದಯನಿಧಿಯ ಮಗ ಇನ್ಬನಿಧಿಯ ಲವ್ವಿಡಬ್ಬಿ.
ಹೌದು, ಇಡೀ ತಮಿಳುನಾಡು ರಾಜಕೀಯವನ್ನೇ ಆಡಿಸ್ತಿರೋ ಡಿಎಂಕೆ ವಂಶದ ಕುಡಿ ಇನ್ಬನಿಧಿ ಈಗ ಡಿಎಂಕೆ ಪಾಲಿಗೆ ಕಂಟಕವಾಗುವ ಎಲ್ಲ ಲಕ್ಷಣ ಕಾಣ್ತಿದೆ.
ಅದಕ್ಕೆ ಕಾರ ಇನ್ಬನಿಧಿ ಗೆಳತಿ ಜತೆಗಿನ ಫೋಟೋಗಳೂ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು.
ಗೆಳತಿ ಸಹನಾ ಜತೆಗಿನ ಇನ್ಬನಿಧಿ ಫೋಟೋಗಳು ವೈರಲ್ ಆಗಿರೋದು ಆಡಳಿತಾರೂಢ ಡಿಎಂಕೆಗೆ ನುಂಗಲಾರದ ಬಿಸಿತುಪ್ಪವಾಗಿದೆ.
ಇತ್ತ ಮಗನ ಫೋಟೋದಿಂದ ಭಾರೀ ಮುಜುಗರಕ್ಕೀಡಾಗಿದ್ದ ಸಚಿವ, ನಟ ಉದಯನಿಧಿ ಸ್ಟಾಲಿನ್ ಎರಡು ತಿಂಗಳ ಬಳಿಕ ಪ್ರತಿಕ್ರಿಯೆ ನೀಡಿದ್ದಾರೆ. ‘ಮಗನಿಗೆ 18 ವರ್ಷ ತುಂಬಿದೆ. ಅದು ಅವನ ವೈಯಕ್ತಿಕ ವಿಚಾರ’ ಎಂದಷ್ಟೇ ಹೇಳಿ ಮಾಧ್ಯಮಗಳಿಂದ ಬಚಾವ್ ಆಗಿದ್ದಾರೆ.
‘ವಯಸ್ಸಿಗೆ ಬಂದ ವ್ಯಕ್ತಿಯ ವೈಯಕ್ತಿಕ ಜೀವನದಲ್ಲಿ ಮಧ್ಯಪ್ರವೇಶಿಸಲು ನನಗೆ ಕೆಲವು ನಿರ್ಬಂಧಗಳಿವೆ’ ಎಂದು ಉದಯನಿಧಿ ಹೇಳಿದ್ದಾರೆ. ಮಗನ ಫೋಟೋ ವೈರಲ್ ಆಗಿರುವ ಪತ್ನಿ ಕೃತಿಕಾ ಜತೆ ಚರ್ಚಿಸಿದ್ದು, ಅದನ್ನು ಬಹಿರಂಗಪಡಿಸಲು ಸಾಧ್ಯವಿಲ್ಲ ಎಂದೂ ಉದಯನಿಧಿ ಹೇಳಿದ್ದಾರೆ. ಇತ್ತ ಉದಯನಿಧಿ ಪತ್ನಿ ಕೃತಿಕಾ ಟ್ವೀಟ್ ಮಾಡಿದ್ದು, ‘ಪ್ರೀತಿಗೆ, ಅದರ ಅಭಿವ್ಯಕ್ತಿಗೆ ಯಾವುದೇ ನಿಷೇಧವಿಲ್ಲ’ ಎಂದು ಹೇಳುವ ಮೂಲಕ ಮಗನ ಲವ್ವಿಡವ್ವಿ ಸಮರ್ಥನೆ ಮಾಡಿಕೊಂಡಿದ್ದಾರೆ.