ಹೊಸದಿಗಂತ ಡಿಜಿಟಲ್ ಡೆಸ್ಕ್ :
`ಆರ್‌ಆರ್‌ಆರ್’ ಸಿನಿಮಾದ ನಾಟು ನಾಟು ಹಾಡಿಗೆ ಆಸ್ಕರ್ ಪ್ರಶಸ್ತಿ ಲಭಿಸಿದೆ. ಈ ಬಗ್ಗೆ ಮೆಗಾಸ್ಟಾರ್ ಚಿರಂಜೀವಿ (Megastar Chiranjeevi) ಅವರು ಪ್ರತಿಕ್ರಿಯೆ ನೀಡಿದ್ದಾರೆ. ಮಗನ ಸಿನಿಮಾಗೆ ಬಗ್ಗೆ ಮೆಚ್ಚುಗೆ ಸೂಚಿಸಿದ್ದಾರೆ.
ನಾಟು ನಾಟು ಗೆದ್ದಿರೋದು ನಮ್ಮೆಲ್ಲರಿಗೂ ಹೆಮ್ಮೆಯ ವಿಚಾರ. ರಾಜಮೌಳಿ, ಕೀರವಾಣಿ, ಚರಣ್, ಜ್ಯೂ.ಎನ್‌ಟಿಆರ್ ಸೇರಿದಂತೆ ಇಡೀ `ಆರ್‌ಆರ್‌ಆರ್’ ತಂಡಕ್ಕೆ ಅಭಿನಂದನೆಗಳು ಎಂದು ಚಿರಂಜೀವಿ ಶುಭಕೋರಿದರು.
ಆಸ್ಕರ್ ಗೆದ್ದಿರುವ ಸಂಭ್ರಮದಲ್ಲಿ ಮಗ ರಾಮ್ ಚರಣ್ (Ramcharan) ಕೂಡ ಪಾಲಿರೋದ್ರಲ್ಲಿ ನಮಗೆ ಗರ್ವವಿದೆ ಖುಷಿಯಿದೆ ಎಂದು ಮೆಗಾಸ್ಟಾರ್ ಚಿರಂಜೀವಿ ರಿಯಾಕ್ಟ್ ಮಾಡಿದ್ದಾರೆ.