ಗಣಿತ ಪರೀಕ್ಷೆ ಮುಂದೂಡಲು ಮಾಡಿದ್ರು ಪ್ಲಾನ್: ಶಾಲೆಗೆ ಬಂತು ಬಾಂಬ್ ಬೆದರಿಕೆಯ ಕರೆ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಪಂಜಾಬ್​ ವಿದ್ಯಾರ್ಥಿಯೊಬ್ಬ ಗಣಿತ ಪರೀಕ್ಷೆಯನ್ನು ಮುಂದೂಡಿಸುವ ಸಲುವಾಗಿ ಶಾಲೆಯನ್ನು ಪರೀಕ್ಷೆ ದಿನ ಬಾಂಬ್​ ಇಟ್ಟು ಉಡಾಯಿಸುವುದಾಗಿ ಹುಸಿ ಕರೆ ಮಾಡಿ ಬೆದರಿಸಿದ ಘಟನೆ ನಡೆದಿದೆ.

ಅಮೃತಸರದ ಖಾಸಗಿ ಶಾಲೆಯಲ್ಲಿ ಸೆಪ್ಟೆಂಬರ್​ 16ಕ್ಕೆ ಗಣಿತ ಪರೀಕ್ಷೆ ನಿಗದಿ ಮಾಡಲಾಗಿದೆ. ಇದರಿಂದ ತಪ್ಪಿಸಿಕೊಳ್ಳಲು ವಿದ್ಯಾರ್ಥಿಗಳಿಬ್ಬರು ಶಾಲೆಯನ್ನು ಬಾಂಬ್​ ಇಟ್ಟು ಉಡಾಯಿಸಲಾಗುವುದು ಎಂದು ಬೆದರಿಕೆ ಹಾಕಿದ್ದಾರೆ.

ಈ ಬಗ್ಗೆ ಶಾಲಾ ಆಡಳಿತ ಮಂಡಳಿ ಪೊಲೀಸರಿಗೆ ದೂರು ನೀಡಿದ್ದು, ತನಿಖೆ ನಡೆಸಿದ ಪೊಲೀಸರು ಕರೆ ಬಂದ ಸ್ಥಳವನ್ನು ಆಧರಿಸಿ ವಿಚಾರಿಸಿದಾಗ ಅದು ಆ ಶಾಲೆಯ ವಿದ್ಯಾರ್ಥಿಗಳಿಂದಲೇ ಬಂದ ಕರೆ ಎಂಬುದು ಗೊತ್ತಾಗಿದೆ.

ವಿದ್ಯಾರ್ಥಿಗಳು ತಂದೆಯ ಮೊಬೈಲ್ ಫೋನ್‌ನಿಂದ ಬಾಂಬ್ ಬೆದರಿಕೆ ಕರೆ ಹಾಕಿದ್ದಾರೆ. ಗಣಿತ ಪರೀಕ್ಷೆಯನ್ನು ಮುಂದೂಡಿಸುವ ಸಲುವಾಗಿ ಈ ತಂತ್ರವನ್ನು ಹೆಣೆದಿದ್ದಾರೆ. ಈ ಸಂಬಂಧ ಇಬ್ಬರು ವಿದ್ಯಾರ್ಥಿಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಕಳೆದ ವಾರವೂ ಇದೇ ರೀತಿಯ ಬಾಂಬ್​ ಬೆದರಿಕೆ ಕರೆ ಮಾಡಿದ ಕಾರಣಕ್ಕಾಗಿ ಮೂವರು ವಿದ್ಯಾರ್ಥಿಗಳನ್ನು ಬಂಧಿಸಲಾಗಿತ್ತು. ವಾರದೊಳಗೆ ಎರಡನೇ ಸಲ ವಿದ್ಯಾರ್ಥಿಗಳು ಪರೀಕ್ಷೆಗಾಗಿ ಹುಸಿ ಬಾಂಬ್​ ಕರೆ ಮಾಡಿ ಬೆದರಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!