ಕುನೋ ರಾಷ್ಟ್ರೀಯ ಉದ್ಯಾನವನಕ್ಕೆ ಬರಲಿದೆ ದ.ಆಫ್ರಿಕಾದಿಂದ 8 ಚಿರತೆಗಳು!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಸೆ.17ರಂದು ಮಧ್ಯಪ್ರದೇಶದ ಕುನೋ ರಾಷ್ಟ್ರೀಯ ಉದ್ಯಾನವನಕ್ಕೆ ಪ್ರಧಾನಿ ನರೇಂದ್ರ ಮೋದಿ ಆಗಮಿಸಲಿದ್ದು, ಇದೇ ವೇಳೆ ಎಂಟು ಚಿರತೆಗಳನ್ನು ಹೆಲಿಕಾಪ್ಟರ್ ಮೂಲಕ ತರಲಾಗುವುದು ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಚಿರತೆಗಳನ್ನು ದಕ್ಷಿಣ ಆಫ್ರಿಕಾದ ನಮೀಬಿಯಾದಿಂದ ರಾಜಸ್ಥಾನದ ಜೈಪುರಕ್ಕೆ ಸರಕು ವಿಮಾನದಲ್ಲಿ ತರಲಾಗುವುದು. ಸೆ.17 ರಂದು ಹೆಲಿಕಾಪ್ಟರ್‌ನಲ್ಲಿ ಅವುಗಳನ್ನು ಕುನೋ-ಪಾಲ್ಪುರ್‌ಗೆ ಕರೆತರಲಾಗುವುದು ಎಂದು ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಜೆ ಎಸ್ ಚೌಹಾಣ್ ತಿಳಿಸಿದ್ದಾರೆ.

1952 ರಿಂದ ಭಾರತದಲ್ಲಿ ಚಿರತೆಗಳು ಅಳಿವಿನಂಚಿನಲ್ಲಿವೆ. ಇಂಟರ್ ಕಾಂಟಿನೆಂಟಲ್ ಟ್ರಾನ್ಸ್‌ಲೋಕೆಶನ್ ಯೋಜನೆಯಡಿ ಚಿರತೆಗಳನ್ನು ಮಧ್ಯಪ್ರದೇಶಕ್ಕೆ ತರಲಾಗುತ್ತಿದೆ. ಅದೇ ರೀತಿ, ದಕ್ಷಿಣ ಆಫ್ರಿಕಾ ಮತ್ತು ಭಾರತ ಸರ್ಕಾರದ ನಡುವಿನ ಒಪ್ಪಂದವೂ ಅಂತಿಮ ಹಂತದಲ್ಲಿದೆ. ಭಾರತೀಯ ಅರಣ್ಯ ಸಂಸ್ಥೆಯ ಡೀನ್ ಬೈಬಿ ಝಾಲಾ ಅವರು ಸಂಪೂರ್ಣ ಕಾರ್ಯಕ್ರಮವನ್ನು ನೋಡಿಕೊಳ್ಳುತ್ತಿದ್ದಾರೆ. ‘ಭಾರತದಲ್ಲಿ ಆಫ್ರಿಕನ್ ಚೀತಾ ಪರಿಚಯ ಯೋಜನೆ’ 2009 ರಲ್ಲಿ ರೂಪಿಸಲಾಯಿತು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!