ಟೇಕ್‌ ಆಫ್‌ ಆಗಿದ್ದ ವಿಮಾನ ತುರ್ತು ಭೂಸ್ಪರ್ಶ: ಪ್ರಯಾಣಿಕರು ಸೇಫ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ದೆಹಲಿಯಲ್ಲಿ ಪಕ್ಷಿ ಡಿಕ್ಕಿ ಹೊಡೆದ ಕಾರಣ ಟೇಕ್‌ ಆಫ್‌ ಆಗಿದ್ದ ವಿಮಾನವೊಂದು ತುರ್ತು ಭೂಸ್ಪರ್ಶ ಮಾಡಿರುವ ಘಟನೆ ನಡೆದಿದೆ.

ದೆಹಲಿಯಿಂದ ಲೇಹ್‌ಗೆ ಹೊರಟಿದ್ದ SG123 ಸ್ಪೈಸ್‌ ಜೆಟ್‌(Spice jet) ವಿಮಾನ ಟೇಕ್‌ ಆಫ್‌(Take off) ಆಗುತ್ತಿದ್ದಂತೆ ಹಕ್ಕಿಯೊಂದು ಬಂದು ಎಂಜಿನ್‌ಗೆ ಡಿಕ್ಕಿ ಹೊಡೆದಿದೆ. ತಕ್ಷಣ ಸಮಯಪ್ರಜ್ಞೆ ಮೆರೆದ ಪೈಲಟ್‌ ವಿಮಾನವನ್ನು ತುರ್ತು ಭೂಸ್ಪರ್ಶ ಮಾಡಿದ್ದಾರೆ.

ಇನ್ನು ವಿಮಾನದಲ್ಲಿದ್ದ ಪ್ರಯಾಣಿಕರೆಲ್ಲರೂ ಸುರಕ್ಷಿತರಾಗಿದ್ದಾರೆ ಎಂದು ಅಧಿಕೃತ ಮೂಲಗಳು ತಿಳಿಸಿವೆ. ಇಂತಹದ್ದೇ ಒಂದು ಘಟನೆ ಕೆಲವು ದಿನಗಳ ಹಿಂದೆ ನಡೆದಿತ್ತು. ದುಬೈಯಿಂದ ಮುಂಬೈ ಆಗಮಿಸಿದ ಎಮಿರೇಟ್ಸ್‌ ವಿಮಾನ (Emirates Flight)ಕ್ಕೆ ಸಿಲುಕಿ ಸುಮಾರು 36 ಫ್ಲೆಮಿಂಗೊ(Flamingos) ಪಕ್ಷಿಗಳು ಸಾವನ್ನಪ್ಪಿರುವ ದಾರುಣ ಘಟನೆ ವರದಿಯಾಗಿತ್ತು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!