Friday, March 24, 2023

Latest Posts

ರಕೂನ್ ತಳಿಯ ನಾಯಿಗಳಿಂದ ಕೋವಿಡ್ ಹರಡಿರುವ ಸಾಧ್ಯತೆ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಜಗತ್ತಿಗೇ ಜಗತ್ತನ್ನೇ ಅಲ್ಲಾಡಿಸಿದ ಕೊರೋನಾ ಬಗ್ಗೆ ಸ್ಫೋಟಕ ಮಾಹಿತಿಯೊಂದು ಹೊರಬಿದ್ದಿದೆ.
ಕೋವಿಡ್ ಮೂಲ ಯಾವುದು ಎಂಬ ಪ್ರಶ್ನೆಗೆ ಉತ್ತರ ಸಿಕ್ಕಿರುವ ಸಾಧ್ಯತೆಯಿದ್ದು, ಇದು ಚೀನಾದ ವುಹಾನ್‌ನಲ್ಲಿರುವ ಸಮುದ್ರ ಖಾದ್ಯ ಮಾರುಕಟ್ಟೆಯಲ್ಲಿ ಅಕ್ರಮವಾಗಿ ಮಾರಾಟವಾಗುತ್ತಿರುವ ಸೋಂಕಿತ ರಕೂನ್ ನಾಯಿಗಳಿಂದ ವೈರಸ್ ಹರಡಿರಬಹುದು ಎಂದು ಅಂತಾರಾಷ್ಟ್ರೀಯ ವೈರಸ್ ತಜ್ಞರ ತಂಡವೊಂದು ತಿಳಿಸಿದೆ.
ಸಾಂಕ್ರಾಮಿಕ ರೋಗ ಹೇಗೆ ಪ್ರಾರಂಭವಾಯ್ತು ಎಂಬುದಕ್ಕೆ ಈ ಡೇಟಾ ನಿರ್ಣಾಯಕ ಅಲ್ಲ, ಆದರೆ ಅದಕ್ಕೆ ಹತ್ತಿರದ ಡೇಟಾ ಇದಾಗಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆಯ ಮಹಾನಿರ್ದೇಶಕ ಟೆಡ್ರೂಸ್ ಅಧಾನಮ್ ಘೆಬ್ರೆಯೆಸಸ್ ಹೇಳಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!