Friday, March 31, 2023

Latest Posts

ಕೇಂದ್ರ ಗೃಹ ಮಂತ್ರಿ ಭೇಟಿಯಾದ ರಾಮ್‌ಚರಣ್‌, ಚಿರಂಜೀವಿ: ಅಮಿತ್‌ ಶಾರಿಂದ ವಿಶೇಷ ಗೌರವ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ʻನಾಟು ನಾಟುʼ ಹಾಡಿನ ಆಸ್ಕರ್ ಪಡೆದ ಬಳಿಕ ಚರಣ್ ಮತ್ತು ಉಪಾಸನಾ ಭಾರತಕ್ಕೆ ಮರಳಿದರು. ದೆಹಲಿಯಲ್ಲಿ ನ್ಯಾಷನಲ್ ಮೀಡಿಯಾ ಆಯೋಜಿಸಿದ್ದ ದೇಶದಲ್ಲೇ ಅತಿ ದೊಡ್ಡ ಸ್ಪೀಕರ್ ಶಿಪ್ ಶೃಂಗಸಭೆಯಾದ ಇಂಡಿಯಾ ಟುಡೇ ಕಾನ್ ಕ್ಲೇವ್ ನಲ್ಲಿ ಭಾಗವಹಿಸಿದ ಚರಣ್ ನೇರವಾಗಿ ದೆಹಲಿಗೆ ತೆರಳಿದ್ದಾರೆ.

ಕಾರ್ಯಕ್ರಮದ ನಂತರ ಚರಣ್ ಕೇಂದ್ರ ಸಚಿವ ಅಮಿತ್ ಶಾ ಅವರನ್ನು ಭೇಟಿ ಮಾಡಿದ್ದರು. ಚರಣ್ ಜೊತೆಗೆ ಮೆಗಾಸ್ಟಾರ್ ಚಿರಂಜೀವಿ ಕೂಡಾ ಇದ್ದು, ನಾಟು ನಾಟು ಸಾಂಗ್‌ಗಾಗಿ ಆಸ್ಕರ್ ಪ್ರಶಸ್ತಿ ಪಡೆದಿದ್ದಕ್ಕೆ ಅಮಿತಾ ಶಾ ಚರಣ್ ಅವರನ್ನು ಶಾಲು ಹೊದಿಸಿ ಗೌರವಿಸಿದರು. ಚರಣ್ ಮತ್ತು ಚಿರಂಜೀವಿ ಅಮಿತ್ ಶಾ ಅವರನ್ನು ಒಟ್ಟಿಗೆ ಭೇಟಿಯಾಗಿದ್ದು, ಚಿತ್ರರಂಗ ಮಾತ್ರ ಅಲ್ಲ ರಾಜಕೀಯ ವಲಯದಲ್ಲೂ ಚರ್ಚೆಗೆ ಗ್ರಾಸವಾಗಿದೆ. ಈ ಕುರಿತು ಚಿರಂಜೀವಿ ಅವರು ಅಮಿತ್ ಶಾ ಭೇಟಿಯ ಫೋಟೋಗಳನ್ನು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ.

ಇಂದು ರಾತ್ರಿ ಚರಣ್ ಹೈದರಾಬಾದ್ ಗೆ ಬರಲಿದ್ದಾರೆ. ದೆಹಲಿಯಿಂದ ವಿಮಾನದಲ್ಲಿ ಚರಣ್, ಉಪಾಸನಾ ಮತ್ತು ಚಿರಂಜೀವಿ ಒಟ್ಟಿಗೆ ಹೈದರಾಬಾದ್‌ಗೆ ಹೊರಟಿದ್ದಾರೆ ಎಂದು ವರದಿಯಾಗಿದೆ. ಇಂದು ರಾತ್ರಿ ಹೈದರಾಬಾದ್ ಬೇಗಂಪೇಟೆ ವಿಮಾನ ನಿಲ್ದಾಣಕ್ಕೆ ಆಗಮಿಸುತ್ತಿದ್ದಂತೆ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ವಿಮಾನ ನಿಲ್ದಾಣವನ್ನು ತಲುಪಿದ್ದಾರೆ. ಚರಣ್ ಗೆ ಅದ್ಧೂರಿ ಸ್ವಾಗತ ನೀಡಲು ಅಭಿಮಾನಿಗಳು ಸಜ್ಜಾಗಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!