Monday, December 4, 2023

Latest Posts

ಗರ್ಭಿಣಿ ಹೊಟ್ಟೆ ಸೀಳಿ, ಮಗುವಿಗೆ ಚೂರಿಯಿಂದ ಇರಿದಿದ್ದರು.. ಇಸ್ರೇಲ್ ಸ್ಥಿತಿ ಹೀಗಿದೆ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಹಮಾಸ್ ಉಗ್ರರು, ಉಗ್ರರಂಥಲ್ಲ ರಾಕ್ಷಸರಂತೆ ವರ್ತಿಸುತ್ತಿದ್ದು, ಯುದ್ಧಭೂಮಿಯ ಭೀಕರತೆಗೆ ಇನ್ನೊಂದು ಉದಾಹರಣೆ ದೊರೆತಿದೆ.

ಮೃತದೇಹಗಳನ್ನು ಸಂಗ್ರಹಿಸಲು ತೆರಳಿದ್ದ ಯೋಸ್ಸಿ ಲ್ಯಾಂಡೌ ಎಂಬ ವ್ಯಕ್ತಿ ಯುದ್ಧದ ಭೀಕರತೆಯನ್ನು ತೆರೆದಿಟ್ಟಿದ್ದಾರೆ. ಹೆಚ್ಚಿನ ಮೃತದೇಹಗಳು ಮಕ್ಕಳದ್ದು ಹಾಗೂ ಮಹಿಳೆಯರದ್ದಾಗಿದೆ. ಕೈಲಾಗದವರು, ವೃದ್ಧರು, ಮಹಿಳೆಯರು, ಮಕ್ಕಳು ಎನ್ನುವ ಯಾವ ಬೇಧವೂ ಇಲ್ಲದೆ ಭೀಕರವಾಗಿ ಜನರನ್ನು ಕೊಂದಿದ್ದಾರೆ ಎಂದು ಹೇಳಿದ್ದಾರೆ.

ಮೃತದೇಹಗಳನ್ನು ಸಂಗ್ರಹಿಸಲು ತೆರಳಿದ್ದ ನನಗೆ ಆಘಾತವಾಗುವ ದೃಶ್ಯ ಕಾಣಿಸಿತ್ತು, 15 ನಿಮಿಷಗಳಲ್ಲಿ ತಲುಪಬೇಕಾಗಿದ್ದ ದಾರಿಯನ್ನು ಸವೆಸಲು 11 ಗಂಟೆಗಳೇ ಬೇಕಾಯ್ತು. ಮೃತದೇಹಗಳನ್ನು ಚೀಲದಲ್ಲಿ ತುಂಬಿಸಲು ಕಿಬ್ಬುಟ್ ಬೀರಿ ಪ್ರದೇಶಕ್ಕೆ ತೆರಳಿದ್ದೆವು. ಮೊದಲ ಮನೆಯೊಳಗೆ ಕಾಲಿಡುತ್ತಿದ್ದಂತೆಯೇ ನನ್ನ ಜೀವವೇ ಹೋದಂತಾಯ್ತು. ರಕ್ತದ ಮಡುವಿನಲ್ಲಿ ಗರ್ಭಿಣಿ ಬಿದ್ದಿದ್ದರು. ಆಕೆಯ ಹೊಟ್ಟೆಯನ್ನು ಸೀಳಿ, ಗರ್ಭದಲ್ಲಿದ್ದ ಮಗುವಿಗೆ ಚಾಕುವಿನಲ್ಲಿ ಇರಿದಿದ್ದರು. ಹೊಕ್ಕುಳ ಬಳ್ಳಿಯ ಜೊತೆ ಇನ್ನೂ ಸಂಪರ್ಕವಿತ್ತು. ಇನ್ನೊಂದೆರಡು ಹೆಜ್ಜೆ ಮುಂದೆ ಹೋಗಿ ನೋಡಿದಾಗ 20ಕ್ಕೂ ಹೆಚ್ಚು ಮಕ್ಕಳ ಮಾರಣಹೋಮ ಕಾಣಿಸಿತ್ತು.

ಎಲ್ಲ ಮಕ್ಕಳ ಕೈಯನ್ನು ಕಟ್ಟಲಾಗಿತ್ತು, ಕೆಲವು ಮಕ್ಕಳಿಗೆ ಲೈಂಗಿಕ ಕಿರುಕುಳ ನೀಡಲಾಗಿತ್ತು ಎಂದು ಹೇಳಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!