ವಿದ್ಯಾರ್ಥಿಗಳಿಗೆ ಗಣರಾಜ್ಯೋತ್ಸವದ ವಿಶೇಷ ಉಡುಗೊರೆ ನೀಡಿದ ಫ್ರಾನ್ಸ್ ಅಧ್ಯಕ್ಷ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಭಾರತದ 75ನೇ ಗಣರಾಜ್ಯೋತ್ಸವದಂದು ಗೌರವ ಅತಿಥಿಯಾಗಿದ್ದ ಫ್ರಾನ್ಸ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ಅವರು ಭಾರತೀಯ ವಿದ್ಯಾರ್ಥಿಗಳಿಗೆ ವಿಶೇಷ ಉಡುಗೊರೆಯನ್ನು ನೀಡಿದರು. “2030 ರ ವೇಳೆಗೆ ಫ್ರಾನ್ಸ್ ಸುಮಾರು 30,000 ಭಾರತೀಯ ವಿದ್ಯಾರ್ಥಿಗಳಿಗೆ ಆತಿಥ್ಯ ನೀಡಲಿದೆ. ಇದು ದೊಡ್ಡ ಭರವಸೆ ಮತ್ತು ಮಹತ್ವಾಕಾಂಕ್ಷೆಗಳೊಂದಿಗೆ ಪ್ರಾರಂಭಿಸಲಾದ ಯೋಜನೆಯಾಗಿದೆ ಎಂದು ಎಮ್ಯಾನುಯೆಲ್ ಮ್ಯಾಕ್ರನ್ ಸಾಮಾಜಿಕ ಮಾಧ್ಯಮ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.

ಭಾರತ ಮತ್ತು ಫ್ರಾನ್ಸ್ ಇಲ್ಲಿಯವರೆಗೆ ಒಪ್ಪಂದ ಮಾಡಿಕೊಂಡಿವೆ ಮತ್ತು ನಾವು ಒಟ್ಟಿಗೆ ಮುಂದುವರಿಯಲು ಬಯಸುತ್ತೇವೆ. ಈ ನಿಟ್ಟಿನಲ್ಲಿ ಫ್ರಾನ್ಸ್ ಮುಂದಿನ ಆರು ವರ್ಷಗಳಲ್ಲಿ 30,000 ಭಾರತೀಯ ವಿದ್ಯಾರ್ಥಿಗಳಿಗೆ ಆತಿಥ್ಯ ನೀಡಲಿದೆ. ಸಹಕಾರದ ತತ್ವಗಳಿಗೆ ಬದ್ಧವಾಗಿರಲು ಭಾರತದ ಯುವಕರನ್ನು ಪ್ರೋತ್ಸಾಹಿಸುವುದು ಇದರ ಉದ್ದೇಶವಾಗಿದೆ.

“ಫ್ರಾನ್ಸ್ 35 ವಿಶ್ವ ದರ್ಜೆಯ ವಿಶ್ವವಿದ್ಯಾಲಯಗಳನ್ನು ಹೊಂದಿದೆ. ನಾವು ಫ್ರೆಂಚ್ ಮಾತನಾಡದವರಿಗೆ ಅಂತರರಾಷ್ಟ್ರೀಯ ಕೋರ್ಸ್ ಅನ್ನು ಸಹ ರಚಿಸುತ್ತಿದ್ದೇವೆ. ಇದು ಇತರ ದೇಶಗಳ ವಿದ್ಯಾರ್ಥಿಗಳಿಗೆ ಸಹಾಯ ಮಾಡುತ್ತದೆ. ಫ್ರೆಂಚ್‌ ಫಾರ್‌ ಆಲ್‌, ಫ್ರೆಂಚ್‌ ಫಾರ್‌ ಎ ಬೆಟರ್‌ ಫ್ಯೂಚರ್‌ ಎಂಬ ಧ್ಯೇಯದೊಂದಿಗೆ ಬೇರೆಯವರಿಗೂ ಫ್ರೆಂಚ್‌ ಕಲಿಸುವ ತರಗತಿಗಳನ್ನು ಕೂಡ ನಿರ್ಮಿಸುತ್ತಿದ್ದೇವೆ” ಎಂದು ತಿಳಿಸಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!