ನಾಯಿ ಬೆಲೆ 50 ಕೋಟಿ ರೂ. ಅಲ್ಲ ಒಂದು ಲಕ್ಷ ಕೂಡ ಇಲ್ಲ ಎಂದ ಇಡಿ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: 

ಸೆಲೆಬ್ರಿಟಿ ನಾಯಿ ತಳಿಗಾರ ಎಂದು ಖ್ಯಾತಿಗಳಿಸಿದ್ದ ಸತೀಶ್ ಎಸ್ ಅವರ ಬೆಂಗಳೂರು ನಿವಾಸದ ಮೇಲೆ ದಾಳಿ ಮಾಡಿದ್ದ ಇಡಿ ಅಧಿಕಾರಿಗಳು ಇಡೀ ಮನೆಯನ್ನು ಶೋಧಿಸಿ ಹಲವು ದಾಖಲೆಗಳನ್ನು ಸಂಗ್ರಹಿಸಿದ್ದಾರೆ.

ಸತೀಶ್ ತೋಳ ಮತ್ತು ಕಕೇಶಿಯನ್ ಶೆಫರ್ಡ್‌ನ ಅಪರೂಪದ ಮಿಶ್ರತಳಿ ಕ್ಯಾಡಬೊಮ್ಸ್ ಒಕಾಮಿ ಎಂಬ ತಳಿಯನ್ನು ಹೊಂದಿದ್ದಾರೆ ಎಂಬುದಕ್ಕೆ ಯಾವುದೇ ದಾಖಲೆ ಪುರಾವೆಗಳು ಕಂಡುಬಂದಿಲ್ಲ ಎಂದು ಮೂಲಗಳು ತಿಳಿಸಿದ್ದು, ಈ ಸಂಬಂಧ ಇಡಿ ಆಧಿಕಾರಿಗಳ ದಾಳಿಯಲ್ಲಿ ಯಾವುದೇ ದಾಖಲೆಗಳೂ ದೊರೆತಿಲ್ಲ ಎನ್ನಲಾಗಿದೆ.

ಅಂತರರಾಷ್ಟ್ರೀಯ ಉಪಸ್ಥಿತಿಯನ್ನು ಹೊಂದಿರುವ ಮಾಧ್ಯಮ ಸಂಸ್ಥೆಗಳು ಸೇರಿದಂತೆ ಹಲವಾರು ಮಾಧ್ಯಮ ಸಂಸ್ಥೆಗಳು ಸತೀಶ್ ಮತ್ತು ಅಪರೂಪದ ತಳಿ ನಾಯಿಯ ಬಗ್ಗೆ ವರದಿ ಮಾಡಿದ್ದವು.

ನಾಯಿಯನ್ನು ಅಮೆರಿಕದಲ್ಲಿ ಸಾಕಲಾಗಿದೆ ಎಂದು ಸತೀಶ್ ಸುದ್ದಿ ಸಂಸ್ಥೆಗಳಲ್ಲಿ ಒಂದಕ್ಕೆ ತಿಳಿಸಿದ್ದರು ಮತ್ತು ಅದನ್ನು ಭಾರತಕ್ಕೆ ಆಮದು ಮಾಡಿಕೊಳ್ಳಲು ಅವರು 50 ಕೋಟಿ ರೂ. ಖರ್ಚು ಮಾಡಲಾಗಿದೆ ಎಂದೂ ಹೇಳಿದ್ದರು. ನಾಯಿಯೊಂದಿಗೆ ಸತೀಶ್ ಅವರ ಛಾಯಾಚಿತ್ರಗಳು ಮತ್ತು ವೀಡಿಯೊಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕ ವೈರಲ್ ಆಗಿತ್ತು.

ಛಾಯಾಚಿತ್ರದಲ್ಲಿರುವ ನಾಯಿಯು ಬೇರೊಬ್ಬ ವ್ಯಕ್ತಿಯ ಒಡೆತನದ್ದಾಗಿದ್ದು, ಸತೀಶ್ ಹೇಳಿಕೊಂಡಂತೆ ಅದರ ಮೌಲ್ಯ 50 ಕೋಟಿ ರೂ.ಗಳಾಗಿರಲಿಲ್ಲ. ಇಡಿ ಬ್ಯಾಂಕ್ ಸ್ಟೇಟ್‌ಮೆಂಟ್‌ಗಳನ್ನು ಸಹ ಪರಿಶೀಲಿಸಿದಾಗ 50 ಕೋಟಿ ರೂ.ಗಳ ವಹಿವಾಟಿನ ಯಾವುದೇ ಪುರಾವೆಗಳು ಕಂಡುಬಂದಿಲ್ಲ. ನಾಯಿಯ ಮೌಲ್ಯ 1 ಲಕ್ಷ ರೂ ಕೂಡ ಇಲ್ಲ ಎಂದು ಇಡಿ ಅಧಿಕಾರಿಗಳು ಹೇಳಿದ್ದಾರೆ ಎಂದು ವರದಿಯಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!