ಹೊಸದಿಗಂತ ಡಿಜಿಟಲ್ ಡೆಸ್ಕ್:
ಅಮುಲ್ ಹಾಲಿನ ದರ ಏರಿಕೆಯಾಗಿದ್ದು, ಇಂದಿನಿಂದ ಲೀಟರ್ಗೆ ೩ ರೂಪಾಯಿ ರೇಟ್ ಹೆಚ್ಚಾಗಿದೆ. ಅಮುಲ್ ಬ್ರ್ಯಾಂಡ್ ಹೆಸರಿನಲ್ಲಿ ಹಾಲು ಹಾಗೂ ಹಾಲಿನ ಉತ್ಪನ್ನಗಳನ್ನು ಮಾರಾಟ ಮಾಡುತ್ತಿರುವ ಗುಜರಾತ್ ಸರ್ಕಾರಿ ಹಾಲು ಮಾರಾಟ ಒಕ್ಕೂಟ ಹಾಲಿನ ಬೆಲೆ ಏರಿಕೆ ಮಾಡಿದೆ.
ಪ್ರತಿ ಲೀಟರ್ಗೆ ಮೂರು ರೂಪಾಯಿ ಏರಿಕೆಯಾಗಿದ್ದು, ಪ್ರತಿ ಲೀಟರ್ ಬೆಲೆ ಇದೀಗ 66 ರೂಪಾಯಿಗಳಾಗಿದೆ. ತಾಜಾ ಹಾಲಿನ ಬೆಲೆ ಲೀಟರ್ಗೆ 54 ರೂಪಾಯಿಯಾಗಿದೆ. ಅಮುಲ್ ಎಮ್ಮೆ ಹಾಲಿನ ದರ ಲೀಟರ್ಗೆ 70 ರೂಪಾಯಿ ಆಗಿದೆ. ಇಂದಿನಿಂದಲೇ ಹೊಸ ದರ ಜಾರಿಗೆ ಬಂದಿದೆ.