September 23, 2026
Wednesday, September 23, 2026
spot_img

ಮೊಟ್ಟೆ ದರ ಎಂಟು ರೂಪಾಯಿ, ಸರ್ಕಾರದಿಂದ ಸಿಗೋದು ಆರು ರೂಪಾಯಿ ಮಾತ್ರ! ಸಮಸ್ಯೆಗೆ ಪರಿಹಾರ ಕೊಟ್ಟ ಮಧು ಬಂಗಾರಪ್ಪ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಶಾಲಾ ಮಕ್ಕಳಿಗೆ ಕೊಡುತ್ತಿರುವ ಮೊಟ್ಟೆಯ ದರ ಏರಿಕೆ ಮಾಡುವ ಬಗ್ಗೆ ಶೀಘ್ರವೇ ಹಣಕಾಸು ಇಲಾಖೆ ಜೊತೆ ಚರ್ಚೆ ನಡೆಸುತ್ತೇನೆ ಎಂದು ಶಾಲಾ ಶಿಕ್ಷಣ ಸಚಿವ ಮಧು ಬಂಗಾರಪ್ಪ ತಿಳಿಸಿದ್ದಾರೆ.

ಸರ್ಕಾರದಿಂದ ಪ್ರತೀ ಮಗುವಿಗಾಗಿ ಒಂದು ದಿನಕ್ಕೆ ಆರು ರೂಪಾಯಿ ಹಣ ಬಿಡುಗಡೆಯಾಗುತ್ತದೆ. ಆದರೆ ಈಗ ಒಂದು ಮೊಟ್ಟೆಯ ದರ ಎಂಟು ರೂಪಾಯಿ ಆಗಿದೆ. ಹೀಗಿರುವಾಗ ಬಾಕಿ ಉಳಿಯುವ ಎರಡು ರೂಪಾಯಿಯನ್ನು ಶಿಕ್ಷಕರು ತಮ್ಮ ಜೇಬಿನಿಂದ ಖರ್ಚು ಮಾಡಬೇಕಿದೆ. ಈ ವಿಚಾರ ವಿಧಾನ ಪರಿಷತ್‌ ಪ್ರಶ್ನೋತ್ತರದ ವೇಳೆ ಪ್ರಸ್ತಾಪವಾಗಿದೆ.

ಮೊಟ್ಟೆ ವಿತರಣೆಯನ್ನು ಏಜೆನ್ಸಿಗೆ ನೀಡಿ

ಕಾಂಗ್ರೆಸ್ ಸದಸ್ಯ ರಾಮೋಜಿಗೌಡ ಪ್ರಶ್ನೆ ಕೇಳಿದರು. ಸರ್ಕಾರ ಸರ್ಕಾರಿ ಶಾಲಾ ಮಕ್ಕಳಿಗೆ ಮೊಟ್ಟೆ ಕೊಡುತ್ತಿದೆ. ಈಗ ಸರ್ಕಾರ 6 ರೂಪಾಯಿ ಕೊಡುತ್ತಿದೆ. ಈಗ ಮಾರುಕಟ್ಟೆಯಲ್ಲಿ ಮೊಟ್ಟೆ ಬೆಲೆ ಜಾಸ್ತಿ ಆಗಿದೆ. ಒಂದು ವರ್ಷದಿಂದ 8 ರೂ. ಮೇಲೆ ದರ ಇದೆ. ಮಂತ್ರಿಗಳು 6 ರೂ. ಕೊಡುತ್ತೇವೆ ಅಂತಾರೆ. 6 ರೂ.ನಲ್ಲಿ 5 ರೂ. ಮಾತ್ರ ಶಾಲೆಗೆ ಹೋಗುತ್ತಿದೆ. ಮೊಟ್ಟೆ ದರ ಜಾಸ್ತಿ ಮಾಡಬೇಕು. ಮಾರುಕಟ್ಟೆ ದರ ಸರ್ಕಾರ ಕೊಡಬೇಕು. ಅಥವಾ ಮೊಟ್ಟೆ ವಿತರಣೆ ಏಜೆನ್ಸಿ ಕೊಡಿ ಅಂತ ಒತ್ತಾಯ ಮಾಡಿದರು.

ಶಿಕ್ಷಕರು ಪಾಠ ಮಾಡ್ತಾ ಇಲ್ಲ

ಸರ್ಕಾರಿ ಶಾಲೆಗಳಲ್ಲಿ ಟೀಚರ್ಸ್‌ ಸಂಖ್ಯೆಯಿದ್ದರೂ ಒಬ್ಬರಿಗೂ ಪಾಠ ಮಾಡಲು ಆಗುತ್ತಿಲ್ಲ. ಸರ್ಕಾರ ಅವರಿಗೆ ಎಸ್‌ಐಆರ್‌, ಚುನಾವಣೆ ಕೆಲಸ, ಜಾತಿಗಣತಿ, ಆನ್‌ಲೈನ್‌ ಕೆಲಸಗಳನ್ನು ನೀಡಲಾಗಿದೆ. ಇದರಿಂದಾಗಿ ಪಾಠ ಮಾಡಲು ಶಿಕ್ಷಕರಿಗೆ ಸಮಯವೇ ಇಲ್ಲದಂತಾಗಿದೆ. ಸರ್ಕಾರಿ ಕೆಲಸಕ್ಕೆ ಶಿಕ್ಷಕರನ್ನು ನೇಮಕ ಮಾಡಬಾರದು. ಮಕ್ಕಳ ಭವಿಷ್ಯಕ್ಕೆ ಶಿಕ್ಷಕರು ನೆರವಾಗಲು ಸರ್ಕಾರ ಅವರನ್ನು ಬೇರೆ ಕೆಲಸಗಳಿಂದ ಮುಕ್ತಗೊಳಿಸಬೇಕು ಎಂದಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !