ಹೊಸದಿಗಂತ ಡಿಜಿಟಲ್ ಡೆಸ್ಕ್:
ಉಪವಾಸ ಮಾಡುತ್ತಾ ಜೀವಂತ ಸಮಾಧಿಯಾದರೆ ಸ್ವರ್ಗ ಪ್ರಾಪ್ತಿಯಾಗಿ ಏಸುವನ್ನು ಭೇಟಿಯಾಗಬಹುದು ಎಂದು ಕೀನ್ಯಾದಲ್ಲಿ ಪಾದ್ರಿಯೊಬ್ಬ ನಂಬಿಸಿದ್ದು, 90ಕ್ಕೂ ಹೆಚ್ಚು ಮಂದಿ ಜೀವಂತ ಸಮಾಧಿಯಾಗಿದ್ದಾರೆ.
ಪಾದ್ರಿಯ ಜಮೀನಿನಲ್ಲಿ 90 ಶವಗಳು ಸಿಕ್ಕಿವೆ. ಇನ್ನೂ ಶವಗಳು ಸಿಗುವ ಸಾಧ್ಯತೆ ಇದೆ. ಸ್ಮಶಾನ ತುಂಬಿರುವ ಕಾರಣ ಶವಗಳನ್ನು ಹುಡುಕುವ ಕೆಲಸ ವಿಳಂಬವಾಗಿದೆ, ಮೃತಪಟ್ಟ 90 ಮಂದಿಯಲ್ಲಿ ಮಕ್ಕಳೂ ಇದ್ದಾರೆ.
ಆಸ್ಪತ್ರೆಯ ಶವಾಗಾರ 40 ಶವಗಳ ಸಾಮರ್ಥ್ಯವನ್ನು ಹೊಂದಿದೆ, ಶವಾಗಾರಗಳು ತುಂಬಿರುವ ಪರಿಣಾಮ ನಾಲ್ಕು ದಿನ ಬಿಡುವು ತೆಗೆದುಕೊಳ್ಳಲಾಗಿದೆ. ಪಾಲ್ ಮೆಕೆಂಝಿ ಎನ್ನುವ ಪಾದ್ರಿಯನ್ನು ಪೊಲೀಸರು ಬಂಧಿಸಿದ್ದಾರೆ. ನಾನು ಯಾರನ್ನೂ ಆತ್ಮಹತ್ಯೆಗೆ ಪ್ರೇರೇಪಿಸಿಲ್ಲ, ಚರ್ಚ್‌ನ್ನು ಐದು ವರ್ಷಗಳ ಹಿಂದೆಯೇ ಮುಚ್ಚಲಾಗಿದೆ ಎಂದು ಪಾದ್ರಿ ಹೇಳಿದ್ದಾರೆ.