VIDEO | ಲೇಟಾಗಿ ಬಂದ ಶಿಕ್ಷಕಿಗೆ ಎಲ್ಲರೆದುರು ಹೊಡೆದ ಪ್ರಿನ್ಸಿಪಾಲ್‌

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಆಗ್ರಾದ ಶಾಲೆಯೊಂದರಲ್ಲಿ ತಡವಾಗಿ ಬಂದ ಶಿಕ್ಷಕಿಗೆ ಪ್ರಿನ್ಸಿಪಾಲ್‌ ಥಳಿಸಿದ ಘಟನೆ ನಡೆದಿದೆ.

ಶಿಕ್ಷಕಿ ಶಾಲೆಗೆ ತಡವಾಗಿ ಬಂದಿದ್ದು, ಇದರಿಂದ ಕೋಪಕೊಂಡ ಪ್ರಿನ್ಸ್ ಪಾಲ್ ಬಟ್ಟೆ ಹಿಡಿದೆಳೆದು ಮನಬದ್ದಂತೆ ಥಳಿಸಿದ್ದಾರೆ. ಶಿಕ್ಷಕಿ ಹಾಗೂ ಪ್ರಿನ್ಸ್ ಪಾಲ್ ನಡುವೆ ಗುದ್ದಾಟ ನಡೆದಿದ್ದು, ಇಬ್ಬರಿಬ್ಬರ ಜಗಳದ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್​​ ಆಗಿದೆ.  ವಿಡಿಯೋ ಎಲ್ಲೆಡೆ ​​ ಆಗುತ್ತಿದ್ದಂತೆ ನೆಟ್ಟಿಗರ ಆಕ್ರೋಶಕ್ಕೆ ಕಾರಣವಾಗಿದೆ.

ಮೇ 3 ರಂದು ಆಗ್ರಾದ ಪ್ರಾಥಮಿಕ ಶಾಲೆಯೊಂದರಲ್ಲಿ ಈ ಘಟನೆ ಸಂಭವಿಸಿದ್ದು, ಅದರ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ಒಂದೇ ದಿನದಲ್ಲಿ ಲಕ್ಷಾಂತರ ವೀಕ್ಷಣೆ ಪಡೆದುಕೊಂಡಿದೆ.ಶಾಲೆಗೆ ತಡವಾಗಿ ಬಂದಿದ್ದಕ್ಕಾಗಿ ಶಿಕ್ಷಕಿ ಗುಂಜಾ ಚೌಧರಿ ಅವರನ್ನು ಪ್ರಾಂಶುಪಾಲರು ಪ್ರಶ್ನಿಸಿದ್ದಾರೆ. ಬಳಿಕ ಇವರಿಬ್ಬರ ನಡುವೆ ತೀವ್ರ ವಾಗ್ವಾದ ನಡೆದಿದೆ. ನಂತರ ಬಟ್ಟೆ ಹಿಡಿದು ಎಳೆದಾಡಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!