SHOCKING | ಬಾಯ್‌ಫ್ರೆಂಡ್‌ ಜೊತೆ ಸೇರೋಕೆ ಮಗೂನೇ ಪ್ರಾಬ್ಲಮ್‌, ಹೆತ್ತ ತಾಯಿಯಿಂದಲೇ ಮಗು ಮರ್ಡರ್‌!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಬಾಯ್‌ಫ್ರೆಂಡ್‌ ಜೊತೆ ಸೇರೋಕೆ ಮಗೂನೇ ಪ್ರಾಬ್ಲಮ್‌ ಎಂದು ಹೆತ್ತ ತಾಯಿಯೇ ಮೂರು ವರ್ಷದ ಮಗುವನ್ನು ಕೊಲೆ ಮಾಡಿದ್ದಾಳೆ. ಬಿಹಾರದ ಮುಜಾಫರ್​ಪುರದಲ್ಲಿ ಘಟನೆ ನಡೆದಿದೆ.

ಆರೋಪಿ ಕಾಜಲ್ ಳನ್ನು ಬಂಧಿಸಲಾಗಿದ್ದು, ತಾನು ವಿವಾಹೇತರ ಸಂಬಂಧ ಹೊಂದಿದ್ದು, ಪತಿಯನ್ನು ಬಿಡಲು ಬಯಸಿರುವುದಾಗಿ ಪೊಲೀಸರಿಗೆ ತಿಳಿಸಿದ್ದಾಳೆ, ಆದರೆ ಆಕೆಯ ಪ್ರಿಯಕರನಿಗೆ ತನ್ನ ಮಗಳು ನನ್ನ ಬರಲು ಇಷ್ಟವಿರಲಿಲ್ಲ. ಹೀಗಾಗಿ ಮಗುವಿನ ಕತ್ತು ಸೀಳಿ ಶವವನ್ನು ಸೂಟ್‌ಕೇಸ್‌ನಲ್ಲಿ ತುಂಬಿ ಪೊದೆಯೊಳಗೆ ಎಸೆದಿದ್ದಳು ಎನ್ನಲಾಗಿದೆ.

ಮನೋಜ್ ಪತ್ನಿ ಕಾಜಲ್ ವಿರುದ್ಧ ಪೊಲೀಸ್ ದೂರು ದಾಖಲಿಸಿದ್ದು, ಎಫ್‌ಐಆರ್ ದಾಖಲಾಗಿದೆ. ಪೊಲೀಸರು ಕಾಜಲ್ ಫೋನ್ ಲೊಕೇಶನ್ ಟ್ರ್ಯಾಕ್ ಮಾಡಿ ದಾಳಿ ನಡೆಸಿದ್ದಾರೆ. ಕೊನೆಗೆ ಆಕೆ ತನ್ನ ಗೆಳೆಯನ ಮನೆಯಲ್ಲಿ ಪತ್ತೆಯಾಗಿದ್ದಳು.

ವಿಚಾರಣೆ ವೇಳೆ ಕಾಜಲ್ ಕಳೆದ ಎರಡು ವರ್ಷಗಳಿಂದ ವಿವಾಹೇತರ ಸಂಬಂಧ ಹೊಂದಿದ್ದು, ತನ್ನ ಬಾಯ್ ಫ್ರೆಂಡ್ ಜೊತೆ ತೆರಳಲು ಬಯಸಿರುವುದಾಗಿ ಪೊಲೀಸರಿಗೆ ತಿಳಿಸಿದ್ದಾಳೆ. ಅವಳು ತನ್ನ ಮಗಳನ್ನು ಕರೆದುಕೊಂಡು ಹೋಗಬೇಕೆಂದು ಬಯಸಿದ್ದಳು. ಆದರೆ ಗೆಳೆಯನಿಗೆ ಇಷ್ಟವಿಲ್ಲದ ಕಾರಣ ಚಾಕುವಿನಿಂದ ಕತ್ತು ಸೀಳಿ ಕೊಲೆ ಮಾಡಿ ಬಳಿಕ ಸೂಟ್​ಕೇಸ್​ಗೆ ತುಂಬಿ ಪೊದೆ ಮಧ್ಯೆ ಎಸೆದಿದ್ದಳು.

ಮಹಿಳೆ ಕೊಠಡಿ ಮತ್ತು ಟೆರೇಸ್‌ನಲ್ಲಿನ ರಕ್ತದ ಕಲೆಗಳನ್ನು ಸ್ವಚ್ಛಗೊಳಿಸಲು ಪ್ರಯತ್ನಿಸಿದಳು, ಆದರೆ ವಿಧಿವಿಜ್ಞಾನ ತಂಡವು ರಕ್ತದ ಕುರುಹುಗಳನ್ನು ಕಂಡುಹಿಡಿಯುವಲ್ಲಿ ಯಶಸ್ವಿಯಾಗಿದೆ.

- Advertisement - Skool Shine Skool Shine

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!