ಹೊಸದಿಗಂತ ಡಿಜಿಟಲ್ ಡೆಸ್ಕ್:
ಜೈಲಿನಲ್ಲಿ ದರ್ಶನ್ ಒಬ್ಬರೇ ಇಲ್ಲ, ಬರೀ ಅವರನ್ನೇ ಯಾಕೆ ಹೈಲೈಟ್ ಮಾಡ್ತೀರಾ? ಉಳಿದ ಆರೋಪಿಗಳ ಬಗ್ಗೆ ಯಾಕೆ ಮಾತನಾಡೋದಿಲ್ಲ ಎಂದು ನಟಿ ಸುಮಲತಾ ಪ್ರಶ್ನಿಸಿದ್ದಾರೆ.
ವಿವೇಚನೆ ಇಟ್ಟುಕೊಂಡು ಮಾತನಾಡೋಣ, ಜೈಲಿನಲ್ಲಿ ಯಾರು ಇರುತ್ತಾರೆ? ಜೈಲಿನಲ್ಲಿ ಇರುವುದೇ ಕ್ರಿಮಿನಲ್ಸ್ ಅಲ್ವಾ? ಎಂದು ಹೇಳಿದ್ದಾರೆ. ಅಲ್ಲಿ ಓಡಾಟ ನಡೆಸೋಕೆ ಯಾರು ಸಿಗುತ್ತಾರೆ. ಯಾವುದಾದ್ರೂ ಒಂದು ತಪ್ಪು ಮಾಡಿದವರೇ ಅಲ್ವಾ ಜೈಲಿಗೆ ಹೋಗೋದು? ಜೈಲಿನಲ್ಲಿ ಇರೋರ ಜೊತೆ ಕಾಣಿಸಿಕೊಳ್ಳದೆ ಇಲ್ಲದವರ ಜೊತೆ ಕಾಣಿಸಿಕೊಳ್ಳೋಕೆ ಹೇಗೆ ಸಾಧ್ಯ. ಈ ವಿಷಯ ಜಾಸ್ತಿ ಎಳೆಯಬೇಡಿ. ಕಾನೂನು ಇದೆಯಲ್ಲ ಎಂದು ಹೇಳಿದ್ದಾರೆ.