ಹೊಸದಿಗಂತ ವರದಿ,ಬಾಗಲಕೋಟೆ:
ಸಂಕ್ರಾಂತಿ ಉತ್ಸವ ರಾಷ್ಟ್ರೀಯ ಸ್ವಯಂ ಸೇವಿಕಾ ಸಮಿತಿಯ ವತಿಯಿಂದ ನಗರದಲ್ಲಿ ಗಣವೇಷಧಾರಿ ಸ್ವಯಂ ಸೇವಕಿಯರ ಪಥಸಂಚಲನ ನಗರದಲ್ಲಿ ದೇಶಾಭಿಮಾನ ಮೂಡಿಸುವಲ್ಲಿ ಯಶಸ್ವಿಯಾಯಿತು.
ನಗರದ ಬಸವೇಶ್ವರ ಕಾಲೇಜ್ ಮೈದಾನದಿಂದ ಎರಡು ಮಾರ್ಗದಲ್ಲಿ ಸಂಚರಿಸಿದ ಪಥಸಂಚಲನ ಪ್ರಮೂಖ ರಸ್ತೆಗಳಲ್ಲಿ ಸಂಚರಿಸಿ ನಂತರ ಬಸವೇಶ್ವರ ವೃತ್ತದಲ್ಲಿ ಸಮಾಗಮಗೊಂಡಿತು.
ಎರಡೂ ಮಾರ್ಗದಲ್ಲಿ ಸಂಚರಿಸಿದ ಪಥಸಂಚಲನ ಬಸವೇಶ್ವರ ವೃತ್ತದಲ್ಲಿ ಸಂಗಮಗೊಂಡಾಗ ಜೈಘೋಷಗಳನ್ನು ಹಾಕುತ್ತಿದ್ದಂತೆ ನೆರೆದ ಜನರ ಮೈ ರೋಮಾಂಚನಗೊಳಿಸಿತು. ಬಾಗಲಕೋಟೆ ವಿಭಾಗಮಟ್ಟದ ಪಥಸಂಚಲನ ಯಶಸ್ವಿಯಾಗಿ ನಡೆಯಿತು.