ಹೊಸದಿಗಂತ ಡಿಜಿಟಲ್ ಡೆಸ್ಕ್:
ಹೆದ್ದಾರಿ ಮೇಲೆ ಟ್ರಾಫಿಕ್ ಜಾಮ್ ಆಗೋದು ಮಾಮೂಲಿ ಆದರೆ ಈ ಬಾರಿ ಟ್ರಾಫಿಕ್ ಜಾಮ್ ಮಾಡಿದ್ದು, ಹೆಬ್ಬಾವು!
ಹೌದು, ಕೊಚ್ಚಿಯ ವಿಮಾನ ನಿಲ್ದಾಣ ಹಾಗೂ ಸಿ ಪೋರ್ಟ್ ರಸ್ತೆ ಮೇಲೆ ದೈತ್ಯ ಇಂಡಿಯನ್ ರಾಕ್ ಪೈಥಾನ್ ತೆವಳುತ್ತಾ ಹೋಗುತ್ತಿದೆ. ಈ ವಿಡಿಯೋ ಎಲ್ಲೆಡೆ ವೈರಲ್ ಆಗಿದೆ.
ಹೆದ್ದಾರಿಯಲ್ಲಿ ಹಾವು ನೋಡಿ ವಾಹನ ಸವಾರರು ಅಲ್ಲಿಯೇ ಗಾಡಿ ನಿಲ್ಲಿಸಿದ್ದಾರೆ. ಇದರಿಂದ ಟ್ರಾಫಿಕ್ ಜಾಮ್ ಉಂಟಾಗಿದೆ. ಹಾವು ರಸ್ತೆ ಕ್ರಾಸ್ ಮಾಡಿ ಕಾಡಿಗೆ ಹೋಗುವವರೆಗೂ ಜನ ಕಾದಿದ್ದಾರೆ. ಇದರಿಂದ 10 ನಿಮಿಷ ಟ್ರಾಫಿಕ್ ಜಾಮ್ ಉಂಟಾಗಿದೆ.
Scene at Kochi's Seaport-Airport road Kakkanad signal last night. pic.twitter.com/NdzjL9A5x1
— Rajesh Abraham🇮🇳 (@pendown) January 10, 2022
ಹಾವು ತೆರಳಲು ಸಮಯ ನೀಡಿದ ಈ ವಿಡಿಯೋ ಎಲ್ಲೆಡೆ ವೈರಲ್ ಆಗಿದ್ದು, ಪ್ರಾಣಿಪ್ರಿಯರು ಸಂತಸ ವ್ಯಕ್ತಪಡಿಸಿದ್ದಾರೆ.