ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಹಾರಾಷ್ಟ್ರ ಉಪ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಇಂದು ದೆಹಲಿಗೆ ತೆರಳಿದ್ದಾರೆ. ರಾಜ್ಯದ ಮುಖ್ಯಮಂತ್ರಿ ಯಾರು ಎಂಬ ನಿರ್ಧಾರದ ಬಿಕ್ಕಟ್ಟನ್ನು ಪರಿಹರಿಸುವ ಪ್ರಯತ್ನದಲ್ಲಿ ಅವರು ಬಿಜೆಪಿ ವರಿಷ್ಠರನ್ನು ಭೇಟಿ ಮಾಡುವ ನಿರೀಕ್ಷೆಯಿದೆ.
ಮಹಾರಾಷ್ಟ್ರದ ನೂತನ ಮುಖ್ಯಮಂತ್ರಿಯ ಬಗ್ಗೆ ಕೇಳಿದ ಪ್ರಶ್ನೆಗೆ, ಫಡ್ನವೀಸ್ ಉತ್ತರವನ್ನು ಶೀಘ್ರದಲ್ಲೇ ನೀಡಲಾಗುವುದು ಮತ್ತು ಅದರ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಹೇಳಿದ್ದಾರೆ.
“ಇದಕ್ಕೆ ಶೀಘ್ರದಲ್ಲೇ ಉತ್ತರ ನೀಡಲಾಗುವುದು. ಮಹಾಯುತಿಯ ಮೂರು ಪಕ್ಷಗಳ ಎಲ್ಲಾ ಹಿರಿಯ ಸದಸ್ಯರು ಒಟ್ಟಾಗಿ ಈ ಬಗ್ಗೆ ನಿರ್ಧಾರ ತೆಗೆದುಕೊಳ್ಳುತ್ತಿದ್ದಾರೆ..” ಎಂದು ಫಡ್ನವೀಸ್ ಮಾಧ್ಯಮಗಳೊಂದಿಗೆ ಮಾತನಾಡುತ್ತಾ ಹೇಳಿದರು.
ಇನ್ನುಳಿದ ಸಚಿವರ ಸ್ಥಾನದ ನಿರ್ಧಾರದ ಕುರಿತು ಮಾತನಾಡಿದ ಫಡ್ನವೀಸ್, ಮುಖ್ಯಮಂತ್ರಿಯ ನಿರ್ಧಾರವನ್ನು ಮೊದಲು ತೆಗೆದುಕೊಳ್ಳಲಾಗುವುದು ನಂತರ ಉಳಿದ ನಿರ್ಧಾರಗಳನ್ನು ತೆಗೆದುಕೊಳ್ಳಲಾಗುವುದು ಎಂದು ತಿಳಿಸಿದ್ದಾರೆ.
ಇವಿಎಂ ಮೇಲೆ ಪ್ರತಿಪಕ್ಷಗಳು ನಡೆಸುತ್ತಿರುವ ಸಾಮೂಹಿಕ ಚಳವಳಿಯ ಬಗ್ಗೆಯೂ ಮಾತನಾಡಿದ ಫಡ್ನವಿಸ್, ಸುಪ್ರೀಂ ಕೋರ್ಟ್ ಈಗಾಗಲೇ ಪ್ರಶ್ನೆಗೆ ಉತ್ತರವನ್ನು ನೀಡಿದೆ ಮತ್ತು ಪ್ರತಿಪಕ್ಷಗಳ ಕೊಳಕು ಕುತಂತ್ರಗಳು ನಿಲ್ಲಲಿ ಎಂದು ಕಿಡಿಕಾರಿದ್ದಾರೆ.