Wednesday, October 5, 2022

Latest Posts

ಹೆಚ್ಚಾಗಲಿದೆ ನಂದಿನಿ ಹಾಲಿನ ರೇಟ್: ಲೀಟರ್‌ಗೆ ಮೂರು ರೂಪಾಯಿ ಬೆಲೆ ಏರಿಕೆ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ನಂದಿನಿ ಹಾಲಿನ ಮಾರಾಟ ದರ ಮತ್ತೆ ಹೆಚ್ಚಾಗಿದೆ. ಪ್ರತಿ ಲೀಟರ್‌ಗೆ ಮೂರು ರೂಪಾಯಿ ಹೆಚ್ಚಿಸಲು ರಾಜ್ಯ ಹಾಲು ಮಂಡಳಿ( ಕೆಎಂಎಫ್) ನಿರ್ಧರಿಸಿದೆ.
ಕೆಎಂಎಫ್‌ನ ವಾರ್ಷಿಕ ಸಭೆಯಲ್ಲಿ ನಿರ್ಧಾರ ಕೈಗೊಂಡಿದ್ದು, ಸರ್ವಾನುಮತದ ನಿರ್ಣಯ ಅಂಗೀಕಾರವಾಗಿದೆ.
ಸಭೆಯಲ್ಲಿ ರಾಜ್ಯದ 14 ಜಿಲ್ಲೆಗಳ ಒಕ್ಕೂಟದ ಅಧ್ಯಕ್ಷರು ಭಾಗಿಯಾಗಿದ್ದು, ಬೆಲೆ ಏರಿಕೆಗೆ ಒಲವು ತೋರಿದ್ದಾರೆ ಎನ್ನಲಾಗಿದೆ. ಕಳೆದ ಎಂಟು ತಿಂಗಳಿನಿಂದ ಹಾಲಿನ ದರ ಹೆಚ್ಚಿಸುವ ಒತ್ತಡ ಇದ್ದು, ಕೆಎಂಎಫ್ ಈ ನಿರ್ಧಾರಕ್ಕೆ ಬಂದಿದೆ. ಬೆಲೆ ಹೆಚ್ಚಳದ ಸಂಪೂರ್ಣ ಲಾಭವನ್ನು ರೈತರಿಗೆ ತಲುಪಿಸುವ ಉದ್ದೇಶದಿಂದ ಈ ನಿರ್ಧಾರಕ್ಕೆ ಬರಲಾಗಿದೆ. ಸರ್ಕಾರದ ಅನುಮತಿ ನಂತರ ಬೆಲೆ ಏರಿಕೆ ಅನ್ವಯವಾಗಲಿದೆ.

 

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!