ರಸ್ತೆಯಲ್ಲಿ ಉರುಳಿ ಬಿತ್ತು ರಿಕ್ಷಾ , ಜನ ವಿಡಿಯೋ ಮಾಡಿದರೇ ಹೊರತು ಸಹಾಯಕ್ಕೆ ಬರಲಿಲ್ಲ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ರಸ್ತೆಯಲ್ಲಿ ಯಾವುದೇ ಅಪಘಾತ ಆದರೂ, ಯಾರಾದರೂ ಬಿದ್ದರೂ ಈಗೀಗ ಜನ ಸಹಾಯ ಮಾಡಲು ಹಿಂದೆ ಮುಂದೆ ನೋಡುತ್ತಿದ್ದಾರೆ. ವಿಡಿಯೋ ಮಾಡಿಕೊಂಡು ನಿಲ್ಲುತ್ತಿದ್ದಾರೆ ಹೊರತು, ಸಹಾಯ ಮಾಡುತ್ತಿಲ್ಲ. ಇಂಥದ್ದೇ ಒಂದು ಘಟನೆ ಉತ್ತರಪ್ರದೇಶದ ರಸ್ತೆಯಲ್ಲಿ ನಡೆದಿದೆ.

ದೊಡ್ಡ ಗುಂಡಿಯೊಂದರಲ್ಲಿ ಇ-ರಿಕ್ಷಾ ಬಿದ್ದಿದ್ದು, ಸಹಾಯಕ್ಕೆ ಒಂದೊಬ್ಬರೂ ಬಂದಿಲ್ಲ. ರಸ್ತೆ ಪಕ್ಕ ಸಾಲು ಸಾಲಾಗಿ ಕಾರ್‌ಗಳು ತೆರಳುತ್ತಿವೆ. ಆದರೆ ಒಬ್ಬರೂ ಕಾರಿನಿಂದ ಇಳಿದು ಸಹಾಯ ಮಾಡಿಲ್ಲ. ಕಿಟಕಿಯಿಂದ ನೋಡುತ್ತಾ ಕುಳಿತಿದ್ದಾರೆ. ಇನ್ನು ಹಲವರ ಕಣ್ಣ ಮುಂದೆಯೇ ಬಿದ್ದ ರಿಕ್ಷಾದಿಂದ ಹೊರಬರಲು ಮಹಿಳೆ ಕಷ್ಟಪಡುತ್ತಿದ್ದು, ಸಹಾಯ ಮಾಡಿಲ್ಲ. ಈ ವಿಡಿಯೋ ಎಲ್ಲೆಡೆ ವೈರಲ್ ಆಗಿದೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!