ರೌಡಿ ಗೂಂಡಾಗಳೆಂದರೆ ಅದು ಕಾಂಗ್ರೆಸ್ ಪಕ್ಷ: ಸಚಿವ ಅಶ್ವತ್ಥನಾರಾಯಣ ತಿರುಗೇಟು

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಕಾಂಗ್ರೆಸ್ ಎಂದರೆ ಗೂಂಡಾಗಳು, ರೌಡಿಗಳಿರುವ ಪಕ್ಷ ಎನ್ನುವುದು ಸಾರ್ವತ್ರಿಕವಾಗಿ ಗೊತ್ತಿರುವ ಸಂಗತಿ ಎಂದು ಉನ್ನತ ಶಿಕ್ಷಣ ಸಚಿವ ಡಾ. ಸಿ.ಎನ್. ಅಶ್ವತ್ಥನಾರಾಯಣ ತಿರುಗೇಟು ನೀಡಿದ್ದಾರೆ.

ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗೂಂಡಾಗಳು, ರೌಡಿಗಳ ಅಗತ್ಯ ಬಿಜೆಪಿಗೆ ಇಲ್ಲ.‌ ರೌಡಿ ಗೂಂಡಾ ಸಂಸ್ಕೃತಿ ಉಳ್ಳವರಿಗೆ ಬಿಜೆಪಿ ಮಾನ್ಯತೆ, ಆದ್ಯತೆಯನ್ನಾಗಲಿ ಕೊಡುವುದಿಲ್ಲ. ಕಾಂಗ್ರೆಸ್ ನಲ್ಲಿ ಅಂಥ ಹಿನ್ನೆಲೆಯುಳ್ಳವರು ಇದ್ದಾರೆ. ಬಿಜೆಪಿ ವಿರುದ್ಧ ಅಭಿಯಾನ ಮಾಡುವ ಬದಲು ಕಾಂಗ್ರೆಸ್ ತನ್ನ ಪಕ್ಷದಲ್ಲಿ ಅಭಿಯಾನ ಮಾಡಿಕೊಳ್ಳಬೇಕು ಎಂದು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು.

ಕಾಂಗ್ರೆಸ್ ನವರು ಯಾವಾಗಲೂ ವಿಚಾರ ಗೊತ್ತಿಲ್ಲದೆ ಮಾತನಾಡುತ್ತಾರೆ. ಕಾಂಗ್ರೆಸ್ ಅಭಿಯಾನಕ್ಕೆ ಜನರಿಂದ ಮಾನ್ಯತೆ ಸಿಗುವುದಿಲ್ಲ. ಸಚಿವ ಸೋಮಣ್ಣ ಅವರ ಮನೆಯಲ್ಲಿ ರೌಡಿ ಪಟ್ಟಿಯ ವ್ಯಕ್ತಿಯೊಬ್ಬರು ಕಾಣಿಸಿಕೊಂಡಿದ್ದಾರೆ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಜನಪ್ರತಿನಿಧಿಗಳನ್ನು ಸಾರ್ವಜನಿಕವಾಗಿ ಎಲ್ಲರೂ ಭೇಟಿಯಾಗುವ ಹಕ್ಕಿದೆ. ಹಾಗಾಗಿ, ಇಂಥ ವಿಚಾರಕ್ಕೆ ಹೆಚ್ಚಿನ ಮಹತ್ವ ಕೊಡುವ ಅಗತ್ಯವಿಲ್ಲ. ಹೀಗಾಗಿ, ನಮ್ಮ ಪಕ್ಷಕ್ಕೆ ಗೂಂಡಾಗಳಾಗಲಿ, ರೌಡಿಗಳಾಗಲಿ ಅಗತ್ಯವಿಲ್ಲ ಎಂದು ಸ್ಪಷ್ಟನೆ ನೀಡಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!