ಯುಎಸ್ ಡಾಲರ್ ವಿರುದ್ಧ 12ಪೈಸೆ ಕುಸಿದ ರೂಪಾಯಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌
ಗುರುವಾರದ ಆರಂಭಿಕ ವಹಿವಾಟಿನಲ್ಲಿ ದೇಶೀಯ ಕರೆನ್ಸಿ ರೂಪಾಯಿಯು ಅಮೆರಿಕದ ಡಾಲರ ವಿರುದ್ಧ 12 ಪೈಸೆ ಕುಸಿದು 82.66 ಕ್ಕೆ ತಲುಪಿದೆ. ವಿದೇಶಿ ನಿಧಿಯ ಹೊರಹರಿವು, ದೇಶೀಯ ಷೇರು ಮಾರುಕಟ್ಟೆಯ ನೀರಸ ಪ್ರದರ್ಶನವು ರೂಪಾಯಿ ಮೌಲ್ಯದ ಮೇಲೆ ಪರಿಣಾಮ ಬೀರಿದೆ ಎನ್ನಲಾಗಿದೆ.

ಅಂತರಬ್ಯಾಂಕ್ ವಿದೇಶಿ ವಿನಿಮಯದಲ್ಲಿ, ದೇಶೀಯ ಘಟಕವು ಡಾಲರ್ ವಿರುದ್ಧ 82.59 ರಲ್ಲಿ ದುರ್ಬಲವಾಗಿ ತೆರೆಯಿತು ನಂತರ 82.66 ಗೆ ಕುಸಿದು, ಹಿಂದಿನ ಮುಕ್ತಾಯಕ್ಕಿಂತ 12 ಪೈಸೆಯ ಕುಸಿತವನ್ನು ದಾಖಲಿಸಿತು.
ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ರೆಪೊ ದರವನ್ನು 25 ಬೇಸಿಸ್ ಪಾಯಿಂಟ್‌ಗಳಷ್ಟು ಹೆಚ್ಚಿಸಿದ ನಂತರ ಬುಧವಾರದ ಸೆಷನ್‌ನಲ್ಲಿ ರೂಪಾಯಿ ಮೌಲ್ಯವು 16 ಪೈಸೆಗಳಷ್ಟು ಏರಿಕೆಯಾಗಿ ಯುಎಸ್ ಡಾಲರ್ ಎದುರು 82.54 ಕ್ಕೆ ತಲುಪಿತ್ತು.

ಏತನ್ಮಧ್ಯೆ, ಆರು ಕರೆನ್ಸಿಗಳ ಬುಟ್ಟಿಯ ವಿರುದ್ಧ ಡಾಲರ್ ಬಲವನ್ನು ಅಳೆಯುವ ಡಾಲರ್ ಸೂಚ್ಯಂಕವು ಶೇಕಡಾ 0.05 ರಷ್ಟು ಕುಸಿದು 103.36 ಕ್ಕೆ ತಲುಪಿದೆ.
ಜಾಗತಿಕ ತೈಲ ಮಾನದಂಡವಾದ ಬ್ರೆಂಟ್ ಕ್ರೂಡ್ ಫ್ಯೂಚರ್ಸ್ ಶೇಕಡಾ 0.01 ರಷ್ಟು ಕುಸಿದು ಪ್ರತಿ ಬ್ಯಾರೆಲ್‌ಗೆ 85.08 ಡಾಲರ್ ಗೆ ತಲುಪಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!