ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲೂಕಿನ ಯಲ್ಲಟ್ಟಿ ಗ್ರಾಮದ ಶ್ರೀ ನರಸಿಂಹೇಶ್ವರ ಆಶ್ರಮದ ಸದ್ಗುರು ಶ್ರೀ ರಾಮಕೃಷ್ಣ ಮಹಾರಾಜರು (93) ಇಹಲೋಕ ತ್ಯಜಿಸಿದ್ದಾರೆ.
ಆರೋಗ್ಯವಾಗಿದ್ದ ಮಹಾರಾಜರು ಅಸ್ವಸ್ತರಂತೆ ಕಂಡು ಬಂದ ಹಿನ್ನೆಲೆಯಲ್ಲಿ ಜಮಖಂಡಿ ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದ್ರೆ ಚಿಕಿತ್ಸೆ ಫಲಿಸದೇ ಆಸ್ಪತ್ರೆಯಲ್ಲಿಯೇ ಸದ್ಗುರು ಶ್ರೀ ರಾಮಕೃಷ್ಣ ಮಹಾರಾಜರು ದೇಹ ತ್ಯಾಗ ಮಾಡಿದ್ದಾರೆಂದು ತಿಳಿದುಬಂದಿದೆ.
ರಾಜ್ಯ ಹಾಗೂ ಹೊರರಾಜ್ಯಗಳಲ್ಲಿ ಅಪಾರ ಭಕ್ತ ವೃಂದ ಹೊಂದಿದ್ದ ಮಹಾರಾಜರ ಅಗಲಿಕೆ ಸಾವಿರಾರು ಭಕ್ತರು ಕಂಬನಿ ಮಿಡಿಯುವಂತೆ ಮಾಡಿದೆ. ಯಾವುದೇ ಪ್ರಚಾರ ಬಯಸದೇ ಆಧ್ಯಾತ್ಮಿಕ ಕ್ಷೇತ್ರದಲ್ಲಿ ತಮ್ಮದೇ ಛಾಪು ಮೂಡಿಸಿದ್ದ ಮಹಾರಾಜರು ತಮ್ಮ ಗುರುಗಳಾದ ಶ್ರೀ ನರಸಿಂಹೇಶ್ವರರ ಮಾರ್ಗದರ್ಶನದಂತೆ ನಾಮೋಪದೇಶ ಮಾಡುತ್ತ ಭಗವಂತನ ಭಕ್ತಿಯ ಮಾರ್ಗಗಳನ್ನ ಎಲ್ಲೆಡೆ ಪಸರಿಸುತ್ತ ಅಪಾರ ಭಕ್ತರಮ್ಮ ಹೊಂದಿದ್ದರು.