‘ಅಂದು ಡ್ರೆಸ್ಸಿಂಗ್ ರೂಮ್‌ನಲ್ಲಿ ಕಾಲಿಗೆ ಬಿದ್ದ ಇದೇ ಹುಡುಗ ಇಂದು ನನ್ನ ದಾಖಲೆ ಮುರಿದ’

ಹೊಸದಿಗಂತ ಡಿಜಿಟಲ್ ಡೆಸ್ಕ್:

ನಿನ್ನೆಯಷ್ಟೇ ವಿಶ್ವಕಪ್‌ನಲ್ಲಿ ಟೀಂ ಇಂಡಿಯಾ ಫೈನಲ್ಸ್ ತಲುಪಿದೆ, ಇದರ ಜೊತೆಗೆ ವಿರಾಟ್ ಕೊಹ್ಲಿ ಸೆಂಚುರಿ ಮೂಲಕ ಸಚಿನ್ ತೆಂಡೂಲ್ಕರ್ ದಾಖಲೆಯನ್ನು ಮುರಿದಿದ್ದಾರೆ. ಈ ಬಗ್ಗೆ ಸಚಿನ್ ಸಂತಸ ವ್ಯಕ್ತಪಡಿಸಿದ್ದು ಹೀಗೆ..

ಮೊದಲ ದಿನ ನೀವು ನನ್ನನ್ನು ಡ್ರೆಸ್ಸಿಂಗ್ ರೂಮ್‌ನಲ್ಲಿ ನೋಡಿದ್ರಿ. ಉಳಿದ ಎಲ್ಲಾ ಪ್ಲೇಯರ‍್ಸ್ ಪ್ರಾಂಕ್ ಮಾಡಿ ನನ್ನ ಕಾಲಿಗೆ ಬಿದ್ದು ಆಶೀರ್ವಾದ ಪಡೆಯುವಂತೆ ಹೇಳಿದ್ರು, ಆಗ ನೀವು ಬಂದು ನನ್ನ ಕಾಲಿಗೆ ಬಿದ್ದಿದ್ರಿ, ನನಗೆ ನಗು ತಡೆಯೋದಕ್ಕೆ ಆಗಿರಲಿಲ್ಲ.

ಆದರೆ ಈಗ ನೀವು ನಿಮ್ಮ ಪ್ಯಾಶನ್ ಹಾಗೂ ಕೌಶಲ್ಯದಿಂದ ನನ್ನ ಹೃದಯವನ್ನೇ ಮುಟ್ಟಿದ್ದೀರಿ. ಅಂದು ಡ್ರೆಸ್ಸಿಂಗ್ ರೂಮ್‌ನಲ್ಲಿ ಭಯಪಡುತ್ತಾ ನನ್ನ ಕಾಲು ಮುಟ್ಟಿದ್ದ ಇದೇ ಹುಡುಗ ಇಂದು ವಿರಾಟ್ ಆಗಿದ್ದಾರೆ. ಈ ಮಟ್ಟಿಗೆ ಬೆಳೆದದ್ದು ನನಗೆ ಖುಷಿ ಕೊಟ್ಟಿದೆ.

ಒಬ್ಬ ಭಾರತೀಯನೇ ನನ್ನ ರೆಕಾರ್ಡ್ ಬ್ರೇಕ್ ಮಾಡಿದ್ದಕ್ಕಿಂತ ಖುಷಿ ಬೇರೊಂದಿಲ್ಲ. ಅದು ವಿಶ್ವಕಪ್‌ನಂತ ದೊಡ್ಡ ವೇದಿಕೆಯಲ್ಲಿ, ನಮ್ಮ ತವರು ಮೈದಾನದಲ್ಲಿ, ಇದೊಂಥರಾ ಕೇಕ್‌ಮೇಲೆ ಇಸಿಂಗ್ ಇದ್ದಂತೆ ಎಂದು ಹೇಳಿದ್ದಾರೆ.

 

 

 

 

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!